SHELTER

ವೃದ್ದಾಶ್ರಮದ ಮನೆಗಳು ತಮ್ಮ ಕುಟುಂಬಗಳೊಂದಿಗೆ ಇರಲು ಸಾಧ್ಯವಾಗದ ಅಥವಾ ನಿರ್ಗತಿಕರಾಗಿರುವ ಹಿರಿಯನಾಗರಿಕರಿಗಾಗಿ ಆಶ್ರಯ ನೀಡುವ ವಾಸಸ್ಥಾನವಾಗಿದೆ ಭಾರತದಲ್ಲಿ ಸಾವಿರಕ್ಕೂ ಹೆಚ್ಚು ಆಶ್ರಮಗಳಿವೆ ಅವರಲ್ಲಿ ಹೆಚ್ಚಿನವರು ಉಚಿತವಾಗಿ ಸೌಕರ್ಯಗಳನ್ನು ನೀಡುತ್ತಾರೆ ಕೆಲವು ವೃದ್ದಾಶ್ರಮಗಳು ನೀಡುವ ಸೇವೆಗಳ ಪ್ರಕಾರ ಮತ್ತು ಗುಣಮಟ್ಟವನ್ನು ಅವಲಂಬಿಸಿ ಪಾವತಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆ ಆಹಾರ,ಆಶ್ರಯ ಮತ್ತು ವೈದ್ಯಕೀಯ ಸೌಲಭ್ಯಗಳ ಹೊರತಾಗಿ ವೃದ್ದಾಶ್ರಮಗಳು ಹಿರಿಯ ನಾಗರಿಕರಿಗಾಗಿ ಉತ್ತಮವಾದ ರೀತಿಯಲ್ಲಿ ಆಶ್ರಯ ವ್ಯವಸ್ಥೆ ಕಲ್ಪಿಸಿವೆ ಭಾರತದಲ್ಲಿ ದೆಹಲಿ,ಕೇರಳ,ಮಹಾರಾಷ್ಟ್ರ,ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ರಾಜ್ಯ ಗಳಲ್ಲಿ ಉತ್ತಮ ಗುಣಮಟ್ಟದ ವೃದ್ದಾಶ್ರಮಗಳನ್ನು ಹಿರಿಯ ನಾಗರಿಕರಿಗಾಗಿ ಅಭಿವೃದ್ದಿಪಡಿಸಿರುತ್ತವೆ.
ಎಲ್ಲಿಯೂ ಹೋಗಲು ಸಾಧ್ಯವಾಗದ ಮತ್ತು ಅವರನ್ನು ಬೆಂಬಲಿಸಲು ಯಾರು ಇಲ್ಲದ ವೃದ್ದರಿಗೆ ವೃದ್ದಾಪ್ಯ ಮನೆಗಳು ಸುರಕ್ಷಿತ ತಾಣವನ್ನು ಒದಗಿಸುತ್ತವೆ ಇಲ್ಲಿ ಫಲಾನುಭವಿಗಳಿಗೆ ಕುಟುಂಬದ ವಾತಾವರಣವನ್ನು ಸಹ ಸೃಷ್ಟಿಸುತ್ತವೆ. ಹಿರಿಯ ನಾಗರಿಕರು ತಮ್ಮ ಸಂತೋಷ ಮತ್ತು ದುಃಖಗಳನ್ನು ಪರಸ್ಪರ ಹಂಚಿಕೊಂಡಾಗ ಭದ್ರತೆ ಮತ್ತು ಸ್ನೇಹಪರತೆಯನ್ನು ಅನುಭವಿಸುತ್ತಾರೆ. ವೃದ್ದಾಶ್ರಮಗಳಲ್ಲಿ ಆಶ್ರಯ ಪಡೆದವರ ಜವಾಬ್ದಾರಿ,ಎಲ್ಲಾ ಮೂಲಭೂತ ಸೌಲಭ್ಯಗಳು ಜೀವನೋಪಾಯ ಮಾಡಲು ಸಾಧ್ಯವಾಗದ ಹಿರಿಯ ನಾಗರಿಕರ ಮರಣದತನಕ ಅವರ ಅವಶ್ಯಕತೆಗಳನ್ನು ಒದಗಿಸಲಾಗಿದೆ ವೃದ್ದರು ಸಮಾಜದ ಹೊರೆಯೆಂದು ಭಾವಿಸಬಾರದು ತಮ್ಮ ಜೀವನದ ಸಂಜೆಗಳನ್ನು ಘನತೆ ಮತ್ತು ಗೌರವದಿಂದ ಕಳೆಯಲು ವೃದ್ದಾಪ ಮನೆಗಳು ಕಾರ್ಯನಿರ್ವಹಿಸುತ್ತವೆ ವಯಸ್ಸಾದವರು ಏಕಾಂಗಿಯಾಗಿ ವಾಸಿಸುತ್ತಿದ್ದರೆ,ಅವಿವಾಹಿತ,ವಿಧವೆ,ಕುಟುಂಬವಿಲ್ಲದ ಸದಸ್ಯರು ಅವರನ್ನು ನೋಡಿಕೊಳ್ಳಲು ಸಮುದಾಯ,ಸರ್ಕಾರ ಮತ್ತು ಸಮಾಜವು ಕರ್ತವ್ಯವನ್ನು ಹಂಚಿಕೊಳ್ಳಬೇಕಾಗಿದೆ.ಇಂತಹ ಸಂಧರ್ಭಗಳಲ್ಲಿ ವಯಸ್ಸಾದವರನ್ನು ನೋಡಿಕೋಳ್ಳುವಲ್ಲಿ ವೃದ್ದಾಶ್ರಮಗಳ ಪಾತ್ರ ಪ್ರಮುಖವಾಗಿರುತ್ತವೆ. ವೃದ್ದಾಪದ ಮನೆಗಳು ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಲಭ್ಯವಿರುವುದಿಲ್ಲ ಆದರೂ ಭಾರತ ಸರ್ಕಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಈ ಯೋಜನೆಯನ್ನು ನೆಡೆಸುತ್ತಿದೆ ನಗರ ಪ್ರದೇಶದಲ್ಲಿ ಸಾಮಾನ್ಯವಾಗಿ ವೃದ್ದಾಶ್ರಮವನ್ನು ನಿರ್ಮಿಸಲು ಓಉಔ ಸಿಫಾರಸ್ಸು ಮಾಡಲಾಗಿ ಹಿರಿಯ ನಾಗರಿಕರ ಮೇಲೆ ಕಲ್ಯಾಣ ಕಾರ್ಯಕ್ರಮಗಳ ಆಧ್ಯತೆ ನೀಡಲಾಗಿದೆ,
- ವಯಸ್ಸಾದ ಪೋಷಕರು ವೃದ್ದಾಶ್ರಮದಲ್ಲಿ ಉಳಿದುಕೊಳುವುದು ಇಂದು ಸಾಮಾನ್ಯ ವಿದ್ಯಮಾನವಾಗಿದೆ ಹೆಚ್ಚಿನ ವೃದ್ದರು ತಮ್ಮನ್ನು ತಾವೇ ಹೊಂದಾಣಿಕೆ ಮಾಡಿಕೊಂಡು ಯಾವಾಗಲೂ ಸಂತೋಷದಿಂದ ಒಂದೇ ಸ್ಥಳದಲ್ಲಿ ವಾಸಿಸಲು ಬಯಸುತ್ತಾರೆ,ತಮ್ಮ ಮಕ್ಕಳು ವಾಸಿಸಲು ಬೇರೆಯಾಗಿ ಮತ್ತು ಕೆಲಸ ಮಾಡಲು ವಿದೇಶಕ್ಕೆ ಹೋಗುವಾಗ ವಯಸ್ಸಾದವರು ಏಕಾಂಗಿಯಾಗಿರುತ್ತಾರೆ ಆದ್ದರಿಂದ ವೃದ್ದ ತಂದೆ ತಾಯಿಯನ್ನು ವೃದ್ದಾಶ್ರಮದ ಆರೈಕೆಗೆ ಸೇರಿಸುವುದು.
- ವಯಸ್ಸಾದಂತೆ ದಿನನಿತ್ಯದ ಚಟುವಟಿಕೆಗಳನ್ನು ನಿರ್ವಹಿಸಲು ಕಷ್ಟವಾಗುತ್ತದೆ ವೃದ್ದಾಶ್ರಮಗಳಲ್ಲಿ ವೃದ್ದರಿಗೆ ಸಹಾಯಕವಾಗುತ್ತದೆ ದೈನಂದಿನ ಕೆಲಸಗಳಿಗೆ ಸಹಾಯ ಮಾಡುವ ಮೀಸಲಾದ ಆರೈಕೆದಾರ ವೃದ್ದಾಶ್ರಮಗಳಾಗಿವೆ
- ವೃದ್ದಾಪದ ಮನೆಗಳು ಹಿರಿಯ ನಾಗರಿಕರಾಗಿರುವುದರಿಂದ ವೈದ್ಯಕೀಯ ಸೌಲಭ್ಯ ಮತ್ತು ತುರ್ತುಸೇವೆಗಳು 24x7 ಲಭ್ಯವಿರುತ್ತವೆ ವಯಸ್ಸಾದವರೋಂದಿಗೆ ಸದಾಕಾಲ ಸಿಬ್ಬಂದಿಯು ಅವರ ಕೋಣೆಗೆ ಆರೈಕೆಗೆ ಸಿದ್ದರಾಗಿರುತ್ತಾರೆ.
- ನಿರ್ಗತಿಕ ಅಥವಾ ಆಯಾ ಕುಟುಂಬಗೊಂದಿಗೆ ನೆಲೆಸಲು ಸಾಧ್ಯವಾಗದ ವೃದ್ದಾಪ ಜನರಿಗೆ ಸಮತೋಲಿತ ಊಟ ಒದಗಿಸುವಿಕೆ ವಯಕ್ತಿಕ ನೆಮ್ಮದಿ ಜೀವನಕ್ಕೆ ಈ ಮನೆಗಳು ಆರೋಗ್ಯಕರವಾಗಿವೆ.
- ಹಿರಿಯ ನಾಗರಿಕರಿಗೆ ವೃದ್ದಾಶ್ರಮಗಳ ಮುಖ್ಯ ಪ್ರಯೋಜನ ಸಿಬ್ಬಂದಿಯ ಉತ್ತಮ ನಡವಳಿಕೆ, ರುಚಿಕರವಾದ ಆಹಾರ ಮತ್ತು ಉತ್ತಮ ಸೇವೆಗಳು.
- ಹಿರಿಯ ನಾಗರಿಕರಿಗೆ ಸುರಕ್ಷಿತ ತಾಣದ ಇಲ್ಲಿನ ವೃದ್ದರು ಸಂಪೂರ್ಣ ಕುಟುಂದ ವಾತವರಣವನ್ನು ಪಡೆಯುತ್ತಾರೆ ಇದು ಅವರ ನೋವು ಮತ್ತು ನಲಿವು ಹಂಚಿಕೊಳ್ಳಲು ನೆರವಾಗುತ್ತದೆ.
- ಹಿರಿಯ ನಾಗರಿಕರಿಗೆ ಸುರಕ್ಷತೆ ಖಂಡಿತವಾಗಿಯು ಒಂದು ಸಮಸ್ಯಯಾಗಿದೆ. ವೃದ್ದಾಶ್ರಮದಲ್ಲಿ ಸ್ಥಿರವಾದ ಭದ್ರತೆಯು ಅನುಕೂಲವಾಗುವುದರಿಂದ ರಕ್ಷಣೆ ನೀಡುತ್ತದೆ ಸುರಕ್ಷಿತ ಜೀವನವನ್ನು ನಡೆಸಲು ಅವರಿಗೆ ಸಹಾಯ ಮಾಡುತ್ತದೆ.
- ವೃದ್ದಾಪದ ಮನೆಗಳನ್ನು ಹಿರಿಯರಿಗೆ ಆಕರ್ಷಕವಾಗಿ ಮಾಡುವ ಒಂದು ಅಂಶವೆಂದರೆ ಒಡನಾಟ. ಅವರು ತಮ್ಮ ವಯಸ್ಸಿನ ಜನರ ನಿರಂತರ ಒಡನಾಟದಲ್ಲಿದ್ದಾರೆ.
- ವೃದ್ದಾಶ್ರಮದಲ್ಲಿ ವಾಸಿಸುವುದರಿಂದ ಅವರ ಮಕ್ಕಳು ಮನೆಯಿಂದ ದೂರದಲ್ಲಿದ್ದರೆ ಅವರು ಏಕಾಂಗಿಯಾಗಿ ಬದುಕ ಬೇಕು ಅದು ಒತ್ತಡ ಮತ್ತು ಖಿನ್ನತೆಗೆ ಕಾರಣವಾಗಬಹುದು ಅವರು ತ್ಯಜಿಸುವ ಭಾವನೆಗಳನ್ನು ತುಂಬಬಲ್ಲ ಒಡನಾಡಿ ಮನೆಯಲ್ಲಿ ಒಬ್ಬ ಇರಬೇಕು ಒಡನಾಟವು ಅತ್ಯುನ್ನತವಾದುದ್ದು.
- ವೃದ್ದಾಪದ ಮನೆಯಲ್ಲಿ ವಾಸಿಸುವ ಸ್ಥಳ ಮತ್ತು ಆಹಾರದ ವಿಷಯದಲ್ಲಿ ಸೀಮಿತವಾದ ಆಯ್ಕೆ ಇರುವುದು ಅವರ ಆರೋಗ್ಯ ದೃಷ್ಟಿಯಿಂದ ಅನುಕೂಲವಾಗಿರುತ್ತದೆ.
- ವೃದ್ದಾಶ್ರಮಗಳಲ್ಲಿ ವಾಸಿಸುವ ವೃದ್ದರಿಗೆ ನಿರ್ಧಿಷ್ಟ ಅನುಕೂಲಗಳಿದ್ದರೂ ಮನೆಯಂತೆ ಸಂತೋಷದ ಜೀವನಕ್ಕೆ ಪರ್ಯಾಯ ವ್ಯವಸ್ಥೆಯಾಗಿದೆ ಈ ದಿನಗಳಲ್ಲಿ ಅವರ ಪ್ರತಿಯೋಂದು ಅಗತ್ಯವನ್ನು ಮನೆಯಲ್ಲಿ ನೋಡಿಕೊಳ್ಳುವಂತಹ ವಾತಾವರಣ ಕಲ್ಪಿಸಲಾಗಿದೆ.
- ಹಿರಿಯರಿಗೆ ಬೆಂಬಲ ಸೇವೆಗಳೊಂದಿಗೆ ವಿಹಾರಕ್ಕೆ ಕರೆದೋಯುವುದು ಪದಗಳ ಆಟವನ್ನ ಆಡುವುದು ಮನರಂಜನೆಯೋಂದಿಗೆ ಸಹಾಯ ಮಾಡುತ್ತಾರೆ.
HEALTH CARE

ವಯಸ್ಸಾಗುವುದೆಂದರೆ ದೈಹಿಕ, ಬೌದ್ದಿಕ, ಸಾಮಾಜಿಕ ಹಾಗೂ ಕೌಟುಂಬಿಕ ಸಾಮರ್ಥ್ಯಗಳು ಕಡಿಮೆಯಾಗುತ್ತಾ ಹೋಗುವುದು. ಅಶಕ್ತತೆಯ ಕಾರಣದಿಂದ ಹಿರಿಯ ನಾಗರಿಕರು ದೈನಂದಿನ ಚಟುವಟಿಕೆಗಳಿಗೆ ಇತರರನ್ನು ಅವಲಂಬಿಸುವ ಅಗತ್ಯ ಹೆಚ್ಚುತ್ತಾ ಹೋಗುವುದು.ಆದರೆ ವಯೋವೃದ್ದರ ದೈಹಿಕ ಯೋಗಕ್ಷೇಮಕ್ಕೆ ಕೊಡುವಷ್ಟು ಪ್ರಾಮುಖ್ಯವನ್ನು ಅವರ ಮಾನಸಿಕ ಯೋಗಕ್ಷೇಮಕ್ಕೆ ಕೊಡಲಾಗುತ್ತಿಲ್ಲ ವೃದ್ದಾಪದ ಕುರಿತು ನಕಾರಾತ್ಮಕ ಚಿಂತನೆಯ ಕಾರಣದಿಂದಲೇ ಇತ್ತಿಚಿಗೆ ವೃದ್ದರ ಆರೋಗ್ಯ ಸಾಮರ್ಥ್ಯ ಕಡಿಮೆಯಾಗಿ ಮರಣ ಪ್ರಮಾಣದಲ್ಲಿ ಹೆಚ್ಚಾಗ ತೋಡಗಿದೆ ಎಂದು ವರದಿಗಳು ತಿಳಿಸುತ್ತವೆ. ಆದ್ದರಿಂದ ವಯಸ್ಸಾದವರಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೋಳ್ಳುವಲ್ಲಿ ಅವರನ್ನು ಉತ್ತೇಜಿಸುವುದು ಮುಖ್ಯ ವಯೋವೃದ್ದರು ಎದುರಿಸುವ ಕೆಲವು ಸಮಸ್ಯೆಗಳೆಂದರೆ ನೋವು, ಮರಣ, ನಿರ್ಲಕ್ಷ, ಹಾಗೂ ಅನಾರೋಗ್ಯ ಸಮಸ್ಯೆಗಳು,ಸಮಾಜದಿಂದ ದೂರವಿರುವುದು, ಇಂತಹ ಕಾರಣಗಳಿಂದ ಕ್ಷೀಣಿಸುವ ಅವರ ಆರೋಗ್ಯವನ್ನು ಉತ್ತಮಗೊಳ್ಳಿಸಲು ವೃದ್ದಾಶ್ರಮಗಳ ಪಾತ್ರ ಪ್ರಮುಖವಾದುದು. ವೃದ್ದಾಪ ಜೀವನದಲ್ಲಿ ಉಂಟಾಗುವ ಬದಲಾವನೆಯಾಗಿದ್ದರು ಕೂಡಾ ಅದನ್ನು ಒಪ್ಪಿಕೊಂಡು ಸಾಗುವುದು ಬಹಳ ಕಷ್ಟ. ಅದರಿಂದ ಉಂಟಾಗುವ ಒಂಟಿತನ ಹಾಗೂ ಖಿನ್ನತೆಯೆ ಮೊದಲಾದ ಹತಾಶೆ ಭಾವನೆಗಳನ್ನು ವೃದ್ದಾಶ್ರಮಗಳಲ್ಲಿ ಬೆರೆಯುವ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ಮತ್ತು ಆ ಮೂಲಕ ಮನಸ್ಸಿನ ಸಮಾಧಾನ ಕಾಯ್ದುಕೊಳ್ಳಬಹುದು.ವೃದ್ದಾಶ್ರಮಗಳಲ್ಲಿ ಆರೈಕೆದಾರು ಅವರೊಂದಿಗೆ ಬೆರೆತು ಓದು,ಚರ್ಚೆ ಮೊದಲಾದ ಚಟುವಟಿಕೆಗಳನ್ನು ನೆಡುಸುತ್ತಾರೆ.
ವಯೋವೃದ್ದರ ಆರೋಗ್ಯಕರ ಯೋಗಕ್ಷೇಮವನ್ನು ಉತ್ತಮಗೊಳಿಸಲು ವಿಧಾನಗಳು
- ಆರೋಗ್ಯಕರ ಜೀವನ ಶೈಲಿಯನ್ನು ಹಿರಿಯ ನಾಗರಿಕರು ವಯಸ್ಸಾದಂತೆ ದೈಹಿಕ ಚಟುವಟಿಕೆಗಳು, ಅದರಲ್ಲೂ ವ್ಯಾಯಾಮಗಳು ಮನೋದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತವೆ. ಇದರಿಂದ ಖಿನ್ನತೆ ಹಾಗೂ ಉದ್ವೇಗದಂಥ ಮಾನಸಿಕ ಕಾಯಿಲೆಗಳನ್ನು ಬಹುಪಾಲು ದೂರವಿಡಬಹುದಾಗಿದೆ.
- ವ್ಯಾಯಾಮದಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಆದ್ದರಿಂದ ವಿಹಾರ, ತೋಟಗಾರಿಕೆ, ನೃತ್ಯ, ಆಟಗಳು ಮೊದಲಾದ ದೈಹಿಕ ಚಟುವಟಿಕೆಗಳನ್ನು ನೆಡೆಸುವುದು ಒಳ್ಳೆಯದು. ಇಳಿವಯಸ್ಸಿನಲ್ಲಿ ಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು. ಮಾತ್ರವಲ್ಲದೆ ಅನಾರೋಗ್ಯವನ್ನು ಕೂಡಾ ಹೋಗಲಾಡಿಸಬಹುದು.
- ವಯೋವೃದ್ದರು ಪರಸ್ಪರ ಆಂತರಿಕ ಬಾಹ್ಯ ಯಾವುದೆ ಬಗೆಯ ಕೆಲಸದಲ್ಲಿ ತೊಡಗಿಸಿ ಕೊಳ್ಳುವುದು ಅವರ ಪಾಲಿಗೆ ಒಳ್ಳೆಯದು. ಅಂದರೆ ವಯೋವೃದ್ದರನ್ನು ಸಮಾಜದ ಇತರ ಜನರೊಂದಿಗೆ ಬೆರೆಯಲು ಮತ್ತು ಸಮುದಾಯದ ಸಹಕಾರ ಪಡೆಯಲು ಅನುಕೂಲವಾಗುವುದು ಅವರ ಮಾನಸಿಕ ಆರೋಗ್ಯ ಮುಖ್ಯವಾದುದ್ದು.
- ವಯಸ್ಸಾದ ಹಿರಿಯನಾಗರಿಕರಲ್ಲಿ ರೋಗ ತಡೆಗಟ್ಟುವಿಕೆ, ಚಿಕಿತ್ಸೆ,ಆರೋಗ್ಯಕರ ಬೆಳವಣಿಗೆ ,ಧೀರ್ಘಕಾಲಿನ ಆರೈಕೆಯನ್ನು ಅಗತ್ಯವಿರುವಲ್ಲಿ ಕ್ರೀಯಾತ್ಮಕ ಸಾಮರ್ಥ್ಯವನ್ನು ಲಭ್ಯವಿರುವ ಔಷಧಿಗಳು ಮತ್ತು ಸಹಾಯಕ ಸಿಬ್ಬಂದಿ ಮೂಲಕ ಕಾಪಾಡಿಕೊಳ್ಳುವುದು
- ಜೀವನದ ಎಲ್ಲಾ ಅಂತಗಳಲ್ಲಿ ಉತ್ತಮ ಆರೋಗ್ಯಕ್ಕಾಗಿ ದೈನಂದಿನ ಕೆಲಸಗಳನ್ನು ಉತ್ತಮಗೊಳಿಸುವುದರಿಂದ ದೈಹಿಕ ಮತ್ತು ಮಾನಸಿಕ ಸಾಮಾರ್ಥ್ಯ ಭಾಗವಹಿಸುವಿಕೆಯನ್ನು ಅವರಲ್ಲಿ ಬದಲಾವಣೆ ಕಾಣಲು ಧೀರ್ಘಕಾಲದ ಆರೋಗ್ಯ ಉತ್ತಮ ಪರಿಣಾಮ ಬೀರುತ್ತದೆ.
- ದೈನಂದಿನ ಆಹಾರದ ಕ್ರಮದಲ್ಲಿ ಪೋಷಕಾಂಶಗಳು, ವಿಶೇಷವಾಗಿ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಗುಣಮಟ್ಟದ ಆಹಾರವನ್ನು ತಯಾರು ಮಾಡುವುದು, ನಿರ್ದಿಷ್ಟ ಆಹಾರ ಉತ್ಪನ್ನಗಳು ವಯಸ್ಸಾದ ಆರೈಕೆ ಮನೆಗಳಲ್ಲಿ ಪ್ರಯೋಜನವನ್ನು ನೀಡುತ್ತದೆ ಆರೋಗ್ಯರ ಜೀವನ ಶೈಲಿ ಭಾಗವಾಗಿ ಸೇವಿಸಿದರೆ ಆರೋಗ್ಯ ಮತ್ತು ಸ್ಮರಣೆಯನ್ನು ಕಾಪಾಡಿಕೊಳ್ಳಬಹುದು.
- ಹಿರಿಯನಾಗರಿಕರಲ್ಲಿ ಜೀರ್ಣಾಂಗ ವ್ಯವಸ್ಥೆಯು ವಯಸ್ಸಿಗೆ ತಕ್ಕಂತೆ ನಿಧಾನಗೊಳ್ಳುತ್ತದೆ ಆದ್ದರಿಂದ ಹೆಚ್ಚಿನ ನಾರಿನ ಹಣ್ಣುಗಳು,ತರಕಾರಿಗಳು ಮತ್ತು ಧವಸ ಧಾನ್ಯಗಳು ಎಂದಿನಂತೆ ಮುಖ್ಯವಾಗಿರುತ್ತವೆ. ಹಿರಿಯರು ನಿರ್ಜಲೀಕರಣಕ್ಕೆ ಒಳಗಾಗುವ ಕಾರಣ ಅವರು ಶಕ್ತಿಯುತವಾಗಿರಲು ಹೆಚ್ಚು ನೀರನ್ನು ಕುಡಿಯ ಬೇಕು.ರೋಗವನ್ನು ತಡೆಗಟ್ಟಲು,ರಕ್ತದೊತ್ತಡ, ಸಕ್ಕರೆಕಾಯಿಲೆ ಹೆಚ್ಚಿನವುಗಳಿಗೆ ಆರೋಗ್ಯ ತಪಾಸಣೆಗೆ ಸೇರಿದಂತೆ ಮೆಡಿಕೇರ್ ಲಸಿಕೆಗಳನ್ನು ಪಡೆಯ ಬಹುದಾಗಿದೆ.
- ಹಿರಿಯರ ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು ಅವರ ಸುತ್ತಲಿನ ಒಡನಾಟಗಳೊಂದಿಗೆ ತೊಡಗಿಸಿಕೊಳ್ಳಲು ಹೊಸ ಹವ್ಯಾಸಗಳನ್ನು ಓದಲು ಮತ್ತು ಬರೆಯಲು ತಿಳಿಹೇಳಿ ಮಾನಸಿಕ ಆರೋಗ್ಯದಲ್ಲಿನ ಒತ್ತಡವನ್ನು ನಿವಾರಿಸ ಬಹುದಾಗಿದೆ.
- ವೈದ್ಯರಿಂದ ಅನುಮೋದಿಸಲ್ಪಟ್ಟ ಅವರಿಗೆ ಚಲನ ಶೀಲತೆ ಸಮಸ್ಯಗಳಿದ್ದರೆ ಧೀರ್ಘ ಅಥವಾ ಸಣ್ಣ ದೂರದ ನಡಿಗೆ ಹಿರಿಯರನ್ನು ಆರೋಗ್ಯವಾಗಿರಿಸಿಕೊಳ್ಳಬಹುದು ಇದು ಲವಲವಿಕೆಯ ಭಾವನೆಯನ್ನು ಉಂಟುಮಾಡಿ ಅತ್ಯುತ್ತಮ ಆರೋಗ್ಯಕರ ಔಷಧವಾಗಿರುತ್ತದೆ.
- ವೃದ್ದಾಪದಲ್ಲಿ ನಿಯಮಿತವಾಗಿ ತಪಾಸನೆ ನೆಡೆಸಲು ಅಗತ್ಯವಿದ್ದಾಗ ಅವಕಾಶವಿರುತ್ತದೆ ಅವರ ಆರೈಕೆ ಮೇಲಿನ ಒತ್ತಡಕ್ಕೆ ಬದಲಾಗಿ ಅಗತ್ಯವಿರುವಾಗ ಆರೋಗ್ಯ ಕೇಂದ್ರಗಳೊಂದಿಗೆ ಸಮನ್ವಯದಿಂದ ವ್ಯವಸ್ಥಿತಗೊಳ್ಳಿಸಬಹುದು.ವೃದ್ದಾಶ್ರಮದ ಮಾನವ ಶಕ್ತಿ ಸೌಲಭ್ಯಗಳ ಮೂಲಭೂತ ಸೌಕರ್ಯಗಳ ಗುಣಮಟ್ಟ ಆಹಾರದ ಪ್ರಮಾಣ ಪೌಷ್ಟಿಕಾಂಶ ಎಲ್ಲ ರೀತಿಯ ಕಾಳಜಿ ಪೂರಕ ಕಾಯ್ದುಕೊಳ್ಳಲಾಗಿದೆ
MEDICAL CARE / DOCTER

ವೃದ್ದಾಪದ ಮನೆಯಲ್ಲಿ ವಾಸಿಸುತ್ತಿರುವ ವಯೋವೃದ್ದರು ಪ್ರವೇಶಿಸಿದ ನಂತರ ಅವರ ವೈದ್ಯಕೀಯ ಸ್ಥಿತಿ,ವಯೋಸಹಜ ಕಾಯಿಲೆಗಳು, ಸಮಸ್ಯೆಗಳು, ದೈಹಿಕ ಮತ್ತು ಮಾನಸಿಕ ವರ್ತನೆಗಳಲ್ಲಿ ಕಂಡುಬರುವ ಅಸಹಜ ಲಕ್ಷಣಗಳು ಹಾಗೂ ಅಂಗವೈಕಲ್ಯತೆ ಮುಂತಾದ ವೈದ್ಯಕೀಯ ಆರೈಕೆಗಳು ಲಭ್ಯವಿರುತ್ತವೆ ಪ್ರತಿಯೋಬ್ಬ ವಯೋವೃದ್ದರಿಗೆ ತುರ್ತು ಚಿಕಿತ್ಸೆ ಮತ್ತು ಅಗತ್ಯವಿರುವ ಔಷಧಗಳ ಸೌಲಭ್ಯದೊಂದಿಗೆ ಆರೋಗ್ಯ ಪೂರ್ಣ ಕಾಳಜಿಯಿಂದ ನೋಡಿಕೊಳ್ಳುವುದು.
ವೃದ್ದಾಶ್ರಮಗಳು ಭೌತಚಿಕಿತ್ಸಕರು,ಪುನರ ವಸತಿ ಶುಶ್ರೂಕರು, ವೈದ್ಯಾಧಿಕಾರಿಗಳು ಮತ್ತು ಇತರ ಸಂಬಂಧಿತ ಆರೋಗ್ಯ ಸೇವೆಗಳ ವೃತ್ತಿಪರರನ್ನು ಒಳಗೊಂಡು ಕಾರ್ಯನಿರ್ವಹಣೆ ಮಾಡಲಾಗುತ್ತದೆ ವೃದ್ದಾಶ್ರಮದ ಧ್ಯೇಯವೆಂದರೆ ಪ್ರತಿಯೊಬ್ಬ ಹಿರಿಯ ನಾಗರಿಕರ ಉತ್ತಮ ದೈನಂದಿನ ಚಟುವಟಿಕೆಗಳಿಗೆ ಅವರ ಆರೋಗ್ಯವನ್ನು ವಾರಕ್ಕೆ ಒಂದು ಸಲ ತಪಾಸಣೆ ಮಾಡಲಾಗುತ್ತದೆ.ಯಾವುದೆ ಫಲಾನುಭವಿಗೆ ಆರೋಗ್ಯದಲ್ಲಿ ಎರುಪೇರಾದರೆ ತಕ್ಷಣ ವೈದ್ಯರನ್ನು ಕರೆತರಲಾಗುವುದು.ಮತ್ತು ಅವರ ಸಲಹೆ ಮೇರೆಗೆ ಶುಶ್ರೂಕರು ಔಷಧಿಗಳನ್ನು ನೀಡುವರು. ಏನಾದರು ತೀವ್ರತರ ಕಾಯಿಲೆಗಳು ಅಥವಾ ತುರ್ತು ಚಿಕಿತ್ಸೆ ಅಗತ್ಯವಿದ್ದಲ್ಲಿ ಅಂತಹ ಹಿರಿಯ ನಾಗರಿಕರನ್ನು 108 ಆ್ಯಂಬುಲೆನ್ಸಗೆ ಕರೆ ಮಾಡಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುವುದು.
ವೃದ್ದಾಪದ ಪ್ರತಿಯೊಂದು ವೈದ್ಯಕೀಯ ಆರೈಕೆ ಕೇಂದ್ರವು ಆರಾಮದಾಯಕವಾದ ಹಾಸಿಗೆ ಸೌಲಭ್ಯವಿರುವುದರಿಂದ ಯಾವುದೇ ತೊಂದರೆಗಳಿಲ್ಲದೆ ಮಲಗಬಹುದು.ಉತ್ತಮ ಆರೋಗ್ಯಕ್ಕಾಗಿ ಪ್ರಥಮ ಚಿಕಿತ್ಸೆ ಸೌಲಭ್ಯ ಹೊಂದಿರುತ್ತದೆ ಪ್ರತಿಯೋಂದು ಕೊಠಡಿಯು ಸಿ.ಸಿ. ಟಿವ್ಹಿ ಕಣ್ಗಾವಲಿನಲ್ಲಿರುತ್ತದೆ.ಹಿರಿಯ ನಾಗರಿಕರು,ಆರೈಕೆ ಸಿಬ್ಬಂದಿಗಳು ಸುರಕ್ಷತೆಗಾಗಿ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ. ವೃದ್ದಾಶ್ರಮಗಳು ವಯಸ್ಸಾದವರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವಮೂಲಕ ಪಾಲನಾ ಕೇಂದ್ರಗಳಾಗಿ ಹೊರಹೊಮ್ಮಿವೆ. ಹಿರಿಯ ನಾಗರಿಕರ ಪ್ರಥಮ ಚಿಕಿತ್ಸೆ ರಕ್ತದೊತ್ತಡ, ಸಕ್ಕರೆ ಕಾಯಿಲೆ,ಮಾನಸಿಕ ಖಿನ್ನತೆ, ದೈಹಿಕ ನ್ಯೂನತೆ, ಕಣ್ಣಿನಪೊರೆ,ಸಂಧಿವಾತ ಮುಂತಾದ ವೈದಯಕೀಯ ತಪಾಸಣೆಗಳನ್ನು ಸ್ಥಳಿಯ ಹಾಗೂ ಸಮುದಾಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೆಲವು ಶರತ್ತುಗಳಡಿಯಲ್ಲಿ ಮೆಡಿಕೇರ್ ಅರ್ಹತೆ ಪಡೆಯುತ್ತಾರೆ. ವೃದ್ದಾಶ್ರಮ ಸೇವಾ ಸಂಸ್ಥೆಗಳು ಹಿರಿಯ ನಾಗರಿಕರ ಆರೋಗ್ಯ ಪೂರ್ಣ ಜೀವನವನ್ನು ಕಲ್ಪಿಸಿ ಅವರ ಭರವಸೆಗಳನ್ನು ಉಳಿಸಿಕೊಂಡು ಅವರ ಸಂತೋಷದ ಮೌಲ್ಯವನ್ನು ಎಲ್ಲರ ಮುಖದಲ್ಲಿ ನಗುವನ್ನು ಮೂಡಿಸಿ ಅತ್ಯುತ್ತಮ ವೃದ್ದಾಪದ ಮನೆಯಾಗಿರುತ್ತದೆ.
RECREATION

“ ಹಿರಿಯ ನಾಗರಿಕರ ಆರೋಗ್ಯವು ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮದ ಸ್ಥಿತಿಯಾಗಿದೆ, ಮತ್ತು ಇದು ಕೇವಲ ರೋಗ ಅಥವಾ ದುರ್ಬಲತೆಯ ಅನುಪಸ್ಥಿತಿಯಲ್ಲ “ ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯದಂತೆ ಹಿರಿಯರನ್ನು ಆರೋಗ್ಯ ಪೂರ್ಣ ಜೀವನ ಶೈಲಿಯನ್ನು ಉತ್ತಮ ಸ್ಥಿತಿಯಲ್ಲಿರಲು ಆರೋಗ್ಯಕರ ಆಹಾರವನ್ನು ಸೇವಿಸಲು ಮತ್ತು ಸರಿಯಾದ ಜೀವಸತ್ವಗಳನ್ನು ತೆಗೆದುಕೊಳ್ಳುವುದು ಸಾಕಾಗುವುದಿಲ್ಲ. ವಯಸ್ಸಾದವರಿಗೆ ಮನಂಜನಾ ಚಟುವಟಿಕೆಗಳಲ್ಲಿ ಮೋಜಿನ ಸನ್ನಿವೇಶಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವುದರಿಂದ ಆರೋಗ್ಯಕರ ಪ್ರಯೋಜನವನ್ನುಪಡೆಯುತ್ತಾರೆನಿಮ್ಮ ವಯಸ್ಸಾದ ಪ್ರೀತಿ ಪಾತ್ರರು ಪರಸ್ಪರ ಬೆರೆತು ಮೋಜಿನ ಚಟುವಟಿಕೆಗಳಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸುವುದು ಅವರ ದೈಹಿಕ ಮತ್ತು ಮಾನಸಿಕ ಗುಣಾತ್ಮಕ ಉತ್ತಮ ಸ್ಥಿತಿಯಲ್ಲಿ ಕಾಣಬಹುದಾಗಿದೆ.
ಹಿರಿಯ ನಾಗರಿಕರು ಅವರ ಹವ್ಯಾಸಗಳನ್ನು ಮುಂದುವರೆಸುವುದರಿಂದ ವೃದ್ದಾಪದಲ್ಲಿ ಅವರು ಮಾಡುತ್ತಿದ್ದ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಕಡಿಮೆ ಮಾಡಬಹುದು. ತಮ್ಮ ನೆಚ್ಚಿನ ಹವ್ಯಾಸದಲ್ಲಿ ತೊಡಗಿಸಿಕೊಳ್ಳಲು ತಮ್ಮ ಪ್ರೀತಿ ಪಾತ್ರರೊಂದಿಗೆ ಇಷ್ಟಪಡುತ್ತಾರೆ. ಇದರಿಂದ ಅವರ ಮನೋಬಾವನೆ ಧನಾತ್ಮಕ ಸ್ಥಿತಿಯಿಂದ ಕೂಡಿರುತ್ತದೆ. ಅದರೊಂದಿಗೆ ಪುಸ್ತಕವನ್ನು ರಚಿಸಲು ಅವರಿಗೆ ಪ್ರೊತ್ಸಾಹ ಮಾಡುವ ಮೂಲಕ ಅವರ ಹವ್ಯಾಸವನ್ನು ಬಳಸಿಕೊಳ್ಳುತ್ತಾರೆ. ಹಿರಿಯರು ತಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಂಡು ಪ್ರವಾಸವನ್ನು ಕರೆದೊಯ್ಯದು ಅವರ ಸಂತಸದ ಕ್ಷಣಗಳನ್ನು ನೆನಪಿಸಲು ಇದು ಒಂದು ಮಾರ್ಗವಾಗಿದೆ. ಇದಲ್ಲದೆ ಅವರನ್ನು ಮಾನಸಿಕವಾಗಿ ಉತ್ತೇಜಿಸುವ ಚಟುವಟಿಕೆಯಾಗಿದ್ದು ಬುದ್ದಿಮಾಂದ್ಯತೆಯಿಂದ ಬಳಲುತ್ತಿರುವ ಹಿರಿಯರಿಗೆ ಒಳ್ಳೆಯದು. ಪ್ರತಿ ನೆನಪಿನ ಚಿತ್ರಕ್ಕೆ ಅವರು ಆ ಸನ್ನಿವೇಶದ ವಿವರಣೆಯನ್ನು ನೀಡುವರು.
ವಯಸ್ಸಾದ ಹಿರಿಯ ನಾಗರಿಕರನ್ನು ಅವರ ಒಡನಾಡಿಗಳೊಂದಿಗೆ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಿ ಅವರ ದೇಹವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ವಯಸ್ಸಾದವರು ಸಂಬಂಧಿಕರು ಆರೈಕೆದಾರರು ಇತರ ನಿವಾಸಿಗಳು ಓಲಂಪಿಕ್ಸ ಚಟುವಟಿಕೆ ಏರ್ಪಡಿಸಿ ಆಹ್ವಾನಿಸುವುದು. ಹಿರಿಯರಲ್ಲಿರುವ ಸೃಜನಶೀಲತೆಯನ್ನು ಹೊರಗೆ ತರಲು ಕಲೆ ಮತ್ತು ಕರಕುಶಲ ಚಟುವಟಿಕೆಗಳಲ್ಲಿ ತೊಡಗಿಸಿ ಹಿರಿಯರು ತಮ್ಮನ್ನು ತಾವು ವ್ಯಕ್ತಪಡಿಸಲು ಅನುವು ಮಾಡಿ ಕೊಡಲಾಗುವುದು. ಇದು ಉತ್ತಮ ವಿಶ್ರಾಂತಿ ತಂತ್ರವಾಗಿ ಕಾರ್ಯನಿರ್ವಹಿಸುತ್ತಾರೆ. ಹಿರಿಯರಿಗೆ ಕೆಲವು ಕಲಾ ಚಟುವಟಿಕೆಗಳಲ್ಲಿ ಚಿತ್ರಕಲೆ ಹೊಲಿಗೆ ಬರಹ ಓದುವುದು ಜನಪ್ರಿಯವಾಗಿವೆ.
ಇಂದು ವೃದ್ದಾಪದ ಮನೆ ಕಾಳಜಿ ಮತ್ತು ಸಹಾನುಭೂತಿಯ ಸ್ಥಳವಾಗಿದೆ, ನಗು ಮತ್ತು ಕಣ್ಣಿರನ್ನು ಹಂಚಿಕೊಳ್ಳುವ ಸ್ಥಳ, ವಿನೋದ, ಉಲ್ಲಾಸದ ಸ್ಥಳ, ಕಲಿಕೆಯ ಸ್ಥಳ ವಯಸ್ಸಾದ ಹಿರಿಯ ನಾಗರಿಕರ ಮನೆ ಎಂದು ಕರೆಯಲ್ಪಡುವ ಆಶ್ರಯ ತಾಣವಾಗಿದೆ. ವೃದ್ದಾಪ್ಯದ ಮನೆಯ ಗುಣಮಟ್ಟವನ್ನು ಅದು ಒದಗಿಸುವ ವಸತಿ ಸೌಕರ್ಯಗಳಿಂದ ಮಾತ್ರವಲ್ಲದೆ ಅದು ಸಕ್ರೀಯವಾಗಿರಲು,ಮಾನಸಿಕವಾಗಿ ಮತ್ತು ದೈಹಿಕವಾಗಿ ಉತ್ತೇಜಿಸಲು ಹಾಗು ತೊಡಗಿಸಿಕೊಳ್ಳಲು ಇರುವ ಅವಕಾಶಗಳಿಂದಲೂ ಹೆಸರಿಸಬಹುದಾಗಿದೆ.ವೃದ್ದಾಶ್ರಮಗಳಲ್ಲಿ ವಾಸಿಸುವ ಹಿರಿಯ ನಾಗರಿಕರಿಗೆ ಅಥವಾ ಫಲಾನುಭವಿಗಳಿಗೆ ಮನರಂಜನೆಗಾಗಿ ಹಲವಾರು ದೈನಂದಿನ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಮಾಡಿಕೊಂಡಿರಲಾಗಿರುತ್ತದೆ ವಯಸ್ಸಾದವರಿಗೆ ದೂರದರ್ಶನದ ವ್ಯವಸ್ಥೆ ದಿನಪತ್ರಿಕೆಗಳು ಒಳಾಂಗಣ ಆಟಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಬೆಳಗ್ಗೆ ಸರಿಯಾಗಿ ಏಳು ಘಂಟೆಗೆ (7 AM) ಚಹಾ ನೀಡಿದ ನಂತರ ಎಲ್ಲರನ್ನು ಕೂಡಿಸಿ ದೂರದರ್ಶನದಲ್ಲಿ ಪ್ರಸಾರವಾಗುವ ರಾಮಾಯಣ,ಮಹಾಭಾರತ, ಸಂತ ಶರಣರ ಮಹರ್ಶಿವಾಣಿ ಹಾಗೂ ಶುಭೋದಯ ನುಡಿಗಳನ್ನು,ಭಕ್ತಿಗೀತೆಗಳನ್ನು ನೋಡಲು ಅನುವು ಮಾಡಲಾಗಿರುತ್ತದೆ. ಸರಿಯಾಗಿ ಎಂಟು ಘಂಟೆಗೆ (8 PM) ಫಲಾನುಭವಿಗಳ ಆರೋಗ್ಯ ದೃಷ್ಟಿಯಿಂದ ಯೋಗಾ ಶಿಕ್ಷಕರನ್ನು ನೇಮಕಾತಿ ಮಾಡಿ ವಿವಿಧ ಸರಳ ಆಸನಗಳನ್ನುಎಲ್ಲರ ಜೊತೆಗೂಡಿ ಮಾಡಿಸಲಾಗುವುದು. ಸಂಜೆ ಆರು ಘಂಟೆಗೆ (6PM) ಎಲ್ಲರನ್ನು ಒಂದೂಗೂಡಿಸಿ ಮಾನಸಿಕ ಉದ್ವೇಗದ ಹತೋಟಿಯಲ್ಲಿಡಲು ಧ್ಯಾನವನ್ನು ಮಾಡಿಸಲಾಗುವುದು. ದೈನಂದಿನ ಕಾರ್ಯಕ್ರಮಗಳಲ್ಲಿ ಸಮಯ ನಿಗದಿಪಡಿಸಿ ಪರಸ್ಪರ ಸಹಕಾರದಿಂದ ದಿನ ಪತ್ರಿಕೆಗಳನ್ನು,ಮನರಂಜನಾತ್ಮಕ ಪುಸ್ತಕಗಳನ್ನು ನೀಡಲಾಗುವುದು.
ಅದೆ ರೀತಿಯಾಗಿ ಆಟಗಳಿಗೆ ಪ್ರಾಮುಖ್ಯತೆ ನೀಡಿ ಒಳಾಂಗಣ ಮತ್ತು ಹೊರಾಂಗಣ ಆಟಗಳಾಗಿ ವಿಭಾಗಿಸಲಾಗಿದೆ. ಒಳಾಂಗಣ ಆಟಗಳಲ್ಲಿ ಪರಸ್ಪರ ಇಬ್ಬರು,ಮೂವರು ಗುಂಪು ಮಾಡಿ ಅವರಿಗೆ ಕೇರಮ್,ಚೆಸ್,ಹಾವು ಏಣಿ ಆಟಗಳನ್ನು ಆಡಿಸಲಾಗುವುದು.ಅದೆ ರೀತಿಯಲ್ಲಿ ಹೊರಾಂಗಣ ಆಟಗಳಲ್ಲಿ ಕ್ರಿಕೆಟ ಚೆಂಡು ಎಸೆತ, ಗುಂಡು ಎಸೆತ, ನಡಿಗೆ ಆಡಿಸಲಾಗುವುದು. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪುರುಷ ಮತ್ತು ಮಹಿಳಾ ವೈಯಕ್ತಿಕವಾಗಿ ಗಾಯನ, ಭಕ್ತಿಗೀತೆ ಜಾನಪದ ಗೀತೆ, ಭಾವಗೀತೆ ಮತ್ತು ಏಕ ಪಾತ್ರಾಭಿನಯ, ಕಥೆ ಹೇಳುವುದು, ಇತರ ಚಟುವಟಿಕೆಗಳನ್ನು ಏರ್ಪಡಿಸಲಾಗುವುದು. ವೃದ್ದಾಶ್ರಮಗಳಲ್ಲಿ ರಾಷ್ಟ್ರಿಯ ಮತ್ತು ಧಾರ್ಮಿಕ ಹಬ್ಬಗಳನ್ನು ಅರ್ಥ ಪೂರ್ಣವಾಗಿ ಐಕ್ಯತೆಯಿಂದ ಎಲ್ಲರೂ ಒಂದಾಗಿ ಆಚರಣೆ ಮಾಡುವ ಮೂಲಕ ಮನೋರಂಜನೆ ಚಟುವಟಿಕೆಗಳನ್ನ ಯಶಸ್ವಿಗೊಳಿಸಲಾಗುವುದು.
