ವೃದ್ಧಾಶ್ರಮದ ಗುರಿ ಮತ್ತು ಉದ್ದೇಶಗಳು :

  • ವಯೋವೃದ್ಧರಿಗೆ ಮೂಲಭೂತ ಸೌಲಬ್ಯಗಳನ್ನು ಕಲ್ಪಿಸುವುದರ ಮೂಲಕ ಅವರ ಜೀವನ ಗುಣಮಟ್ಟವನ್ನ ಅಭಿವೃದ್ಧಿಪಡಿಸಿಅವರಲ್ಲಿ ಜೀವನದ ಉತ್ಸಾಹವನ್ನು ತುಂಬಿ ಸ್ವಾರ್ಥ ಜೀವನದೆಡೆಗೆ ಮುನ್ನಡಿಸುವಸದು
  • ಹಿರಿಯ ನಾಗರಿಕರಿಗೆ ಪುನರ್ವಸತಿ ಸೌಲಭ್ಯವನ್ನು ಕಲ್ಪಿಸುವುದರ ಜೊತೆಗೆ ಅಗತ್ಯವಿರುವ ವಿಷೇಶ ಪಾಲನೆ ಮತ್ತು ಸಹಾಯ ಸಹಕಾರವನ್ನು ಒದಗಿಸುವುದು.
  • ವೃದ್ಧರಿಗೆ ದೈಹಿಕ ಹಾಗೂ ಮಾನಸಿಕ ಯೋಗ ಶಿಬಿರಗಳ ಮೂಲಕ ಸಮತೋಲಿತ ಆರೋಗ್ಯವನ್ನು ಕಾಪಾಡುವದು.
  • ಮೂಲಭೂತ ಸೌಲಬ್ಯಗಳಿಂದ ವಂಚಿತರಾದ ಹಿರಿಯನಾಗರಿಕರನ್ನು ಪತ್ತೆಮಾಡಿ ಧಾಖಲು ಮಾಡಿಕೊಳ್ಳುವುದು ಹಾಗೂ ಪಾಲನೆ ಪೋಷಣೆ ಮತ್ತು ರಕ್ಷಣೆ ನೀಡುವದು
  • ಇಂದು ನಾ ನಿನಗಾದರೆ, ನೀ ನನಗೆ ಎಂಬ ಭಾವನೆ ದೂರ ಸರಿದು ನಾವೆಲ್ಲರೂ ಒಂದು ಕುಟುಂಬದವರು ಎಂಬ ಪರಿಕಲ್ಪಣೆ ಮೂಡಿಸುವುದು
  • ದಿನನಿತ್ಯದ ಜೀವನದಲ್ಲಿ ಧೃಡ ನಿರ್ದಾರ ಚೈತನ್ಯ ತುಂಬುವದು ಪ್ರಭುತ್ವನಾಗರಿಕರನ್ನಾಗಿ ಮಾಡಿ ಸ್ವತಂತ್ರರಾಗಿರುವಂತೆ ನೋಡಿಕೊಳ್ಳುವದು.
  • ಆಶ್ರಯ, ಆಹಾರದಂತಹ ಸೌಕರ್ಯಗಳನ್ನ ಒದಗಿಸಿ ವಯಸ್ಸಾದ ವ್ಯಕ್ತಿಯ ಜೀವನ ಮಟ್ಟವನ್ನು ವೈದ್ಯಕೀಯ ಆರೈಕೆ ಅವಕಾಶಗಳ ಮೂಲಕ ಸುಧಾರಿಸುವುದು.
  • ಸರ್ಕಾರ / ಸರ್ಕಾರೇತರ ಸಂಘಟನೆಗಳು/ ಪಂಚಾಯತರಾಜ್ ಸಂಸ್ಥೆಗಳು/ ಸ್ಥಳಿಯ ಮಂಡಳಿ ಮತ್ತು ಸಮೂದಾಯಗಳ ಸಹಾಯವನ್ನು ಪಡೆದು ವೃದ್ಧರನ್ನು ಕ್ರಿಯಾಶೀಲತೆಯತ್ತ ಮುಖ ಮಾಡುವಂತೆ ಮಾಡುವದು.
  • ವಯೋವೃದ್ಧರಿಗಾಗಿ ಸ್ವಯಂ ಸೇವಕರ ಶಾಖೆ ಹಿರಿಯ ನಾಗರಿಕರ ಸಂಘಟನೆಗಳ ನಿರ್ಮಾಣ ಕಲ್ಪಿಸುವ ಉದ್ದೇಶ ಹೊಂದಿರುತ್ತವೆ.
  • ವಯಸ್ಸಾದ ಹಿರಿಯರ ಹಕ್ಕುಗಳು ಮತ್ತು ಯೋಗಕ್ಷೇಮವನ್ನು ಅವರ ಆಸೆ ಅನುಸಾರವಾಗಿ ಬೆಂಬಲಿಸುವ ಮೂಲಕ ಸುರಕ್ಷಾ ಜಾಲವನ್ನು ಮೂಡಿಸುವುದು
  • ವೃದ್ಧರ ವಯಸ್ಸಿನಲ್ಲಿ ಆರೋಗ್ಯದ ಸಮಗ್ರ ವ್ಯವಸ್ಥೆಗಳು ರೋಗ ತಡೆಗಟ್ಟುವಿಕೆ ದೀರ್ಘಕಾಲಿನ ಆರೈಕೆಯನ್ನು ಬೆಂಬಲಿಸುವದು.
  • ವಯಸ್ಸಾದ ಹಿರಿಯರಿಗೆ ಮೂಲಭುತ ಸಾಕ್ಷರತೆ ಆರೋಗ್ಯ ಸಾಕ್ಷರತೆ ತೆಗೆದುಕೊಳ್ಳುವ ನಿರ್ಧಾರವನ್ನ ಒದಗಿಸುವುದು.
  • ಹಿರಿಯ ನಾಗರಿಕರ ಮೌಲ್ಯಗಳನ್ನ ಮುಂದುವರಿಸಲು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಉಳಿಸಿ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಲು ಅನೂವೂ ಮಾಡಿಕೊಡುವುದು.
  • ಮಕ್ಕಳಿಗೆ ತಂದೆ ತಾಯಿ ಪ್ರೀತಿಯಿಂದ ಗೌರವಪೂರ್ಣವಾದ ಸ್ಥಾನ-ಮಾನವನ್ನು ಜಾಗ್ರುತೆ ಮಾಡಿ ಅವರ ಕುಟುಂಬ ಸದಸ್ಯರ ನೆನಪು ಬಾರದಂತೆ ವೃದ್ಧಾಶ್ರಮಗಳು ತಮ್ಮ ಪಾತ್ರವನ್ನ ಸಲ್ಲಿಸುತ್ತವೆ.

TARGET GROUP :

ಮೈತ್ರಿ ವೃದ್ಧಾಶ್ರಮ ಸಮಾಜದಲ್ಲಿ ನೊಂದ ಮಕ್ಕಳಿಂದ ದೂರವಾದ ಮತ್ತು ಕುಂಟುಂಬದಲ್ಲಿ ಮಕ್ಕಳ ನಿರ್ಲಕ್ಷಕ್ಕೆ ಒಳಗಾದ ಹಿರಿಯ ನಾಗರಿಕರಿಗೆ ಆಶ್ರಯ ನೀಡುವುದರ ಜೊತೆಗೆ ಧಾಖಲಾದ ಪ್ರತಿಯೊಬ್ಬ ವೃದ್ಧರನ್ನು ಪ್ರೀತಿಯಿಂದ ಸಹನೆಯಿಂದ ಭಾವಪೂರ್ಣವಾದ ಆರೈಕೆಯ ಮೂಲಕ ಅವರ ಕುಟುಂಬ ಸದಸ್ಯರ ಹಾಗೂ ಮಕ್ಕಳ ನೆನಪು ಬಾರದಂತೆ ಅವರ ಅವಶ್ಯಕತೆಗಳನ್ನು ಈಡೇರಿಸಬಹುದಾಗಿದೆ. ಹಿರಿಯ ನಾಗರಿಕರ ಹಾಗೂ ವೃದ್ಧರ ಆರೋಗ್ಯದ ಬಗ್ಗೆ ವೃದ್ಧಾಶ್ರಮಗಳು ಕಾರ್ಯತಂತ್ರ ಮತ್ತು ಯೋಜನೆಯನ್ನು ಅನುಷ್ಠಾಣಗೊಳಿಸುವುದರಿಂದ ಪ್ರಸ್ತುತ ಭವಿಷ್ಯದ ಪೀಳಿಗೆಗೆ ಭದ್ರ ಪಡಿಸಿಕೊಳ್ಳಲು ಹಿರಿಯ ಜೀವಿಗಳಿಗೆ ಸುಸ್ತಿರ ಗುರಿಗಳ ಸಾಕ್ಷಾತ್ಕಾರಕ್ಕೆ ಸಹಕಾರಿಯಾಗುತ್ತದೆ. ಸಮಗ್ರ ಮತ್ತು ಗುಣಮಟ್ಟದ ಆರೈಕೆಯನ್ನು ಒದಗಿಸುವುದು ಮತ್ತು ಹಿರಿಯ ನಾಗರಿಕರ ಸುರಕ್ಷಿತ ಸಹಾನೂಬೂತಿ, ಜನ್ಮ ಜಾತ ಪರಿಸರ ಸುತ್ತ ಮುತ್ತಲಿನ ಸಂಭಂದಿಕ ಗೌರವ ಮತ್ತು ಘನತೆಯಿಂದ ಬದುಕುವಂತೆ ನೋಡಿಕೊಳ್ಳುವದು. ಹಿರಿಯ ನಾಗರಿಕರ ಜೀವನದ ಜ್ಞಾನ ಮತ್ತು ಅನುಭವಗಳನ್ನು ರಚನಾತ್ಮಕ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಕಾರ್ಯ ನಿರ್ವಹಿಸುವದು. ಹಿರಿಯ ನಾಗರಿಕರು ಮತ್ತು ಸಮಾಜ ಎರಡಕ್ಕೂ ಅರ್ಥ ಪೂರ್ಣವಾಗಿ ಕೊಡುಗೆ ನೀಡಬಹುದಾಗಿದೆ. ಸಾಮಾಜಿಕ ಹಿರಿಯ ನಾಗರಿಕರ ಸಂಸ್ಥೆಯನ್ನು ಸ್ಥಾಪಿಸುವದು ಹಿರಿಯ ನಾಗರಿಕರನ್ನು ಸಂಹನ ಮಾಡುವದು ಅವರಿಂದ ಆರೋಗ್ಯಕರ ಮತ್ತು ಶಾಂತಿಯುತ ಸಮಾಜದ ಅಗತ್ಯವಿರುವ ಮೌಲ್ಯಗಳನ್ನು ಕಲಿಯುವದು. ಸಾಮಾಜಿಕ ಪ್ರತ್ಯೇಕತೆಯನ್ನು ಹೋಗಲಾಡಿಸಲು ಒಡನಾಟ, ಭಾವನಾತ್ಮಕ ಬೆಂಬಲ ಚಿಕಿತ್ಸೆ, ಮನರಂಜನಾ ಸೌಲಭ್ಯಗಳು ಹಾಗೂ ಚಟುವಟಿಕೆಗಳನ್ನು ಒದಗಿಸುವುದು. ದೈನಂದಿನ ಜೀವನದಲ್ಲಿ ಹಿರಿಯ ನಾಗರಿಕರಿಗೆ ಸ್ವಾತಂತ್ರ್ಯವನ್ನು ಒದಗಿಸುವುದು ಮತ್ತು ಜೀವನದ ಉನ್ನತ ಮೌಲ್ಯಗಳನ್ನು ಪುನರಸ್ಥಾಪಿಸುವದು. ಹಿರಿಯರಿಗೆ ಸವಾಲಿನ ಮತ್ತು ನೆಮ್ಮದಿಯ ಅಗತ್ಯವಿರುವ ಆಶ್ರಯವನ್ನು ನಿಗದಿಪಡಿಸುವುದು ಸಕಾರಾತ್ಮಕವಾದ ಉದ್ದೇಶವಾಗಿರುತ್ತದೆ. ವಯಸ್ಸಾದ ಹಿರಿಯರು ತಮ್ಮ ಪ್ರೀತಿ ಪಾತ್ರರು, ಸ್ನೇಹಿತರು ಮತ್ತು ಕುಟುಂಬದವರು ಸಹಭಾಗಿತ್ವದಲ್ಲಿ ತಮ್ಮ ಸಂತೋಷವನ್ನ ಪಡೆಯುತ್ತಾರೆ.

ವೃದ್ಧಾಶ್ರಮಗಳಲ್ಲಿ ವೃದ್ಧರ ಆರೋಗ್ಯ ಭಾವನಾತ್ಮಕ ಸಂಬಂಧ ಸಧೃಡತೆಯ ಯೋಜನೆ ಮತ್ತು ಗುರಿ ಹೊಂದಿಸುವ ಹಂತಗಳಲ್ಲಿರುವಾಗ ವಯಸ್ಸಾದ ಪ್ರೀತಿ ಪಾತ್ರರು ತಮ್ಮ ಆಸೆ ಬೇಡಿಕೆಗಳನ್ನು ಅನುಭವಿಸಲು ಅವರಿಗೆ ಬೇಕಾದ ಸಂಪನ್ಮೂಲಗಳನ್ನು ಗುರುತಿಸುವುದು ಮುಖ್ಯ . ಭಾರತದಲ್ಲಿ ವಯಸ್ಶದವರ ಜನಸಂಖ್ಯೆಯಲ್ಲಿ ಸ್ಥಿರ ಏರಿಕೆ ಇದೆ. ನಮ್ಮ ಸಾಂಪ್ರದಾಯಿಕ ಮೌಲ್ಯಗಳು ಹಿರಿಯರಿಗೆ ಗೌರವ ಮತ್ತು ಕಾಳಜಿಯನ್ನು ನೀಡುವಲ್ಲಿ ಒತ್ತು ನೀಡುತ್ತವೆ. ವಯಸ್ಸಾದ ವ್ಯಕ್ತಿ ಸಾಕಷ್ಟು ಸಾಮಾಜಿಕ ಭದ್ರತೆಯ ಸಮಸ್ಸೆಗಳನ್ನು ಎದುರಿಸುತ್ತಿದ್ದಾರೆ. ಮುಪ್ಪು ಒಂದು ಪ್ರಮುಖ ಸಾಮಾಜಿಕ ಸವಾಲಾಗಿ ಮಾರ್ಪಟ್ಟಿದೆ. ವೃದ್ಧರ ಆರ್ಥಿಕ ಮತ್ತು ಆರೋಗ್ಯಕರ ಅಗತ್ಯತೆಗಳನ್ನು ಪೂರೈಸುವ ಅವಶ್ಯಕತೆಯಿದೆ.ವಯಸ್ಸಾದವರ ಭಾವನಾತ್ಮಕ ಅಗತ್ಯೆತೆಗಳಿಗೆ ಅನೂಕೂಲಕರವಾದ ಸಾಮಾಜಿಕ ಪರಿಸರವನ್ನು ವೃದ್ಧಾಶ್ರಮಗಳು ರಚಿಸುವ ಮೂಲಕ ಸ್ಪಷ್ಠವಾದ ಗುರಿ ಮತ್ತು ಉದ್ದೇಶವನ್ನು ತಿಳಿಸುತ್ತದೆ.

ಅಭೀಪ್ರಾಯ

ಯಶಸ್ವಿ ಯಶೋಗಾಧೆಗಳು

“ ವಿನಾ ದೈನ್ಯನಜೀವನಂಅನಾಯ ಸೇನ ಮರಣಂ” ಎಂಬ ನುಡಿಯಂತೆ ಪ್ರತಿಯೊಬ್ಬರ ಮನದಾಳದ ಬಯಕೆಗಳನ್ನು ವ್ಯಕ್ತಪಡಿಸುತ್ತದೆ. ವ್ಯಕ್ತಿಯಾರ ಹಂಗೂ ಇಲ್ಲದೆ ಸ್ವತಂತ್ರವಾಗಿಜೀವನ ನೇಡೆಸಿ ಯಾವ ನೊವು.ರೋಗ ಆತಂಕಗಳಿಲ್ಲದೆ ಸಾವನ್ನಪ್ಪಬೇಕು ಎಂಬುದು ಅವನ ಆಶಯ. ಆದರೆ ವಿದಿ ಎಲ್ಲರ ಜೀವನದಲ್ಲಿ ತನ್ನದೆ ಆಟವನ್ನುಆಡಿಸುತ್ತದೆ.

ವಯಸ್ಸಾಗುವುದು ಸಹಜ ಮತ್ತು ಸಾರ್ವತ್ರಿಕ ಪ್ರತಿಕ್ಷಣವು ಆಯಸ್ಸಿನ ಗಡಿಯಾರದ ಮುಳ್ಳು ಚಲಿಸುತ್ತದೆ, ಇದರ ಮದ್ಯದಲ್ಲಿ ಪ್ರತಿಯೊಬ್ಬರಿಗೂತನ್ನದೆಆದ ತೋಳಲಾಟಗಳು.ಸುಖ ದೂಖಃಗಳು ಬಂದೂ ಹೊಗುತ್ತವೆಇಂತಹಒಂದು ನಿಜವಾದಕತೆಯನ್ನು ನಮ್ಮ ವೃದ್ದಾಶ್ರಮದಲಿ ವಯೋವೃಧ್ದಿಯಾದ ಸುಂದರಮ್ಮಗಂಡಚಂದ್ರಪ್ಪಇವರುತನ್ನ ನೊವನ್ನ ಹಂಚಿಕೊಂಡಿದ್ದಾರೆ.

ಸುಂದರಮ್ಮ ವಯಸ್ಸು 73 ಊರುಚಿತ್ರದುರ್ಗಚಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ವಿಶ್ವನಾಥ ಎಂಬ ಪುಟ್ಟಗ್ರಾಮದ ನಿವಾಸಿ ನನಗೆ 2 ಗಂಡು ಮಕ್ಕಳು ಹಿರಿಯ ಮಗ ಕೆಂಚಪ್ಪ ವ್ಯವಸಾಯ ಮಾಡುತ್ತಿದ್ದರೆ.ಕಿರಿಯ ಮಗ ಸರ್ಕಾರಿ ಕೇಲಸದಲ್ಲಿದ್ದನೆ .ನನ್ನಗಂಡಚಂದ್ರಪ್ಪ ಮರಣಹೊಂದಿ 3 ವರ್ಷಗಳಾಯಿತು.ಅವರುಇದ್ದ ಪೂರ್ವದಲ್ಲಿ ಮನೆಯಲಿ ಆಸ್ತಿಯ ಸಂಬಂದ ಮಕ್ಕಲೊಡನೆ ಜಗಳವಾಡಿ ಇಬ್ಬರು ಮಕ್ಕಳನ್ನು ಬಿಟ್ಟು ಬೇರೆಕಡೆ ವಾಸವಾಗಿದ್ದೇವುಆದು ಸುಮಾರು 10 ವರ್ಷಗಳ ಕಾಲ.ನಂತರ ನನ್ನ ಪತಿ ಸತ್ತ ಬಳಿಕ ಹೋಬ್ಬಳೆ ಜೀವನ ನಡೆಸಲುಆಗದಕಾರಣತನ್ನ ಹಿರಿಯಮಗನಾದಕೆಂಚಪ್ಪನ ಬಳಿ ಆಶ್ರಯ ಪಡೆದೆ.ಸುಮಾರು 6 ತಿಂಗಳ ಕಾಲ ಯಾವುದೇರೀತಿತೊಂದರೆಇಲ್ಲದೆ ನನ್ನ ಮಗ ಚನ್ನಾಗಿ ನೋಡಿಕೊಂಡಆದರೆಇದ್ದಕ್ಕಿಂದಂತೆ ನನ್ನ ಸೊಸೆಗೂ ಯಾವುದೊ ಸಣ್ಣ ವಿಚಾರದಲ್ಲಿಗಲಾಟೆಆಯಿತು.ಅಲ್ಲಿಂದ ನನಗೆ ಪ್ರತಿದಿನ ನನ್ನ ಸೊಸೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು ಆದರೂ ನನ್ನ ನೋವು ನನ್ನ ಮಗನ ಬಳಿ ಹೇಳಿಕೊಳ್ಳದೆ ಹೇಗೊ ಬದುಕು ಕಳೇದೆ ಕೊನೆಗೆ ಅವಳು ಆಡಿದ ಮಾತುಗಳನ್ನು ಸಹಿಸಲಾರದೆ ನನ್ನ ಮಗನ ಬಳಿ ವಿಚಾರನ್ನು ತಿಳಿಸಿದೆ ಆದರೆ ಮಗ ತನ್ನ ಹೆಂಡತಿಯ ಪರವಾಗಿಯೆ ಮಾತನಾಡಿ ಮನಸ್ಸನ್ನು ಘಾಸಿಗೋಲಿಸಿದನು, ಹಾಗೂ ಪ್ರತಿದಿನ ತನ್ನ ಹೆಂಡತಿಯ ಮಾತುಕೇಳಿ ನನ್ನನ್ನು ಹೊಡೆಯುತ್ತಿದ್ದನು. ಬೈಯುತತಿದ್ದನು ನಾನು ಅದನ್ನು ಸುಮಾರು ದಿನಗಳ ಕಾಲ ಸಹಿಸಿಕೊಂಡು ಬದುಕಿದೆ ಕೊನೆಗೆ 1 ದಿನ ಹುಬ್ಬಳ್ಳಿಯಲ್ಲಿರುವ ನನ್ನಚಿಕ್ಕ ಮಗನಾದಚಂದ್ರಪ್ಪನಿಗೆ ತಿಳಿಸಿ ಅವನ ಬಳಿ ಹೊದೆಆದರೆ ನನಗೆ ಹಳ್ಳಿ ಬಿಟ್ಟು ಪಟ್ಟಣದಲ್ಲಿ ವಾಸಿಸಲು ಇಷ್ಟವಾಗಿರಲಿಲ್ಲ ಅಷ್ಟರೊಳಗೆ ನನ್ನ ಮಗನಿಗೆ ವರ್ಗಾವಣೆಯಾಯಿತು ನನಗೆ ನನ್ನ ಮಗನ ಜೊತೆ ಹೊಗಲು ಇಷ್ಟ ಇರಲಿಲ್ಲ ಕಾರಣ ಮೊದಲೇ ನನ್ನ ಹಿರಿಯ ಮಗನಿಂದತುಂಬ ಕಷ್ಟಗಳನ್ನು ಅನುಭವಿಸಿದ್ದೆ. ಹಾಗಾಗಿ ನನ್ನ ಮಗನ್ನು ನನಗೆ ವೃದ್ದಾಶ್ರಮಕ್ಕೆ ಸೇರಿಸುಎಂದು ಕೇಳಿಕೊಂಡೆ. ಅವನು ಸಹ ಯಾಕೆ ಏನು.ಎಂದೂ ಸಹ ಕೆಳದೆ “ನೊಂದವರ ಬಾಸನ ಹೊಂಬೆಳಕು” ಶ್ರೀ ಮೈತ್ರಿ ವೃದ್ದಾಶ್ರಮಕ್ಕೆ ಸೇರಿಸಿದರು ಅಲ್ಲಿಯವರೆಗೆ ನನ್ನ ದುಖ:ಗಳನ್ನು ಕೇಳುವವರೆ ಇರಲಿಲ್ಲ ಇಲ್ಲಿ ಬಂದೂ ಸುಮಾರು 2 ದಿನಗಳ ಕಾಲ ಒಬ್ಬಂಟಿಯಾಗಿ ಅಳುತ್ತಾ ದಿನ ಕಳೆದೇ ನಂತರಇಲ್ಲಿನ ಸಿಬ್ಬಂದಿಗಳಿಗೆ ನನ್ನ ಸುಖ. ದುಖ: ಗಳನ್ನು ಹೇಳಿ ಮನಸ್ಸು ಹಗುರ ಮಾಡಿಕೊಂಡೆ, ನಿಜವಾಗಿಯೂಇಲ್ಲಿನ ಸಿಬ್ಬಂದಿಗಳೂ ನನ್ನ ಮಕ್ಕಳು ಸಹ ನೋಡಿಕೊಳ್ಳದ ರೀತಿಯಲ್ಲಿತುಂಬಾಚನ್ನಾಗಿತನ್ನತಾಯಿಯಂತೆ ಹಾಗೂ ಮೊಗುವಿನಂತೆಆರೈಕೆ ಮಾಡುತ್ತಾರೆ, ಜೊತೆಗೆಇಲ್ಲಿನ ವಾತಾವರಣ ನನ್ನ ಮನಸ್ಸಿಗೂ. ನೆಮ್ಮದೆ. ಹರುಷ ಕಳೆದುಕೊಂಡ ಜೀವನವನ್ನು ದೊರಕಿಸಿ ಕೊಟ್ಟಿದ್ದಾರೆಎಂದೂ ಹೇಳಿ ಈ ಸಂಸ್ಥೆಯುಜೀವನದಲ್ಲಿ ಅನೇಕ ಕಷ್ಟ ನಷ್ಟಗಳನ್ನು ಅನುಭವಿಸಿ ನೊಂದವರ ಬದುಕಿಗೆಜೀವನ ಬೇಳಗುವ ದೀಪವಾಗಿದೆ ಈ ದೀಪ ಸದಾ ಕಾಲ ಈಗೆ ಬೆಳಗುತ್ತಿರಲಿ ಎಂದೂ ಹಾರೈಸುತ್ತನೆ.

ಧನ್ಯವಾದಗಳೊಂದಿಗೆ
ಇಂತಿ ನಿಮ್ಮ ನಿವಾಸಿ
ಸುಂದರಮ್ಮ