ದಾಖಲಾತಿ ಪ್ರಕ್ರೀಯೆ
ಹಿರಿಯನಾಗರಿಕರು ಜೀವನದೂದಕ್ಕೂ ತಮ್ಮ ಕುಟುಂಬದ ಹಾಗೂ ಮತ್ತಿತ್ತರರ ಏಳಿಗೆಗಾಗಿ ಅಹೋರಾತ್ರಿ ದುಡಿದು, ಬಳಲಿ, ಜೀವನದ ಸಂಧ್ಯಾಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಇಚ್ಚಿಸುತ್ತಿರು ಜೀವಗಳು. ತಮ್ಮ ಮಕ್ಕಳು ತಮ್ಮನ್ನು ವೃದ್ದಾಪ್ಯದಲ್ಲಿ ನೋಡಿಕೋಳ್ಳಲಿ ಎಂಬ ಆಸೆ ಇದ್ದರು ಮಕ್ಕಳ ಪ್ರಗತಿಗೆ , ಜೀವನ ಶೈಲಿಗೆ ತಮ್ಮಿಂದ ಅಡಚಣೆಯಾಗಬಾರದೆಂಬ ಮನೋಭಾವ ಉಳ್ಳವರು ಬೆಳೆದ ಮಕ್ಕಳು ಸಂಕಷ್ಟದಲ್ಲಿದ್ದಾಗ ತಮ್ಮ ಕೈಯಲ್ಲಿದ್ದದನ್ನುಅವರಿಗೆ ನೀಡಿ ತಮ್ಮ ಸ್ವಂತ ಭವಿಷ್ಯದ ಯೋಚನೆ ಮಾಡದಿರುವಷ್ಟು ಮುಗ್ದರು. ಜೀವನ ಸಂಗಾತಿಯನ್ನು ಕಳೆದುಕೋಂಡು ಒಂಟಿಯಾಗಿ ಬದುಕುತ್ತಿರುವ ವಯೋವೃದ್ದರ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ ದಿನ ಬೆಳಗಾದರೆ ದಿನಪತ್ರಿಕೆ ಮತ್ತು ದೃಶ ಮಾಧ್ಯಮಗಳಲ್ಲಿ ಬರುತ್ತಿರುವ ಹಿರಿಯರ ಮೇಲೆ ನೆಡೆಯುತ್ತಿರುವ ದೌರ್ಜನ್ಯ,ಕೊಲೆ,ಬೆದರಿಕೆ,ಸುಲಿಗೆ,ಹಲ್ಲೆಗಳಿಂದ ಹೆದರಿದರೂ ಅದಕ್ಕಾಗಿ ಏನು ಮಾಡಬೇಕೆಂದು ಸರಿಯಾದ ಮಾಹಿತಿ ಇಲ್ಲದೆ ಮನೆಯೊಳಗೆ ಕುಳಿತಿರಬೇಕಾದ ಪರಿಸ್ಥಿತಿ ಹಿರಿಯನಾಗರಿಕರದ್ದಾಗಿದೆ. ಅನಾರೋಗ್ಯ, ಮರೆವು, ಅಜಾಗರೂಕತೆ ಇವುಗಳಿಂದಾಗಿ ಮನೆಯಲ್ಲೂ ನೆಡೆಯುವ ಮನಸ್ತಾಪಗಳಿಗೆ ಸಿಲುಕುತ್ತಾ ಸದಾಕಾಲ ಆತಂಕದ ಜೀವನ ನೆಡೆಸುವಂತಾಗಿದೆ. ಈ ಪರಿಸ್ಥಿತಿಯನ್ನು ಹೋಗಲಾಡಿಸಿ ವೃದ್ದರು ನೆಮ್ಮದಿಯ ಜೀವನ ನೆಡೆಸಲು ಅನುವು ಮಾಡಿಕೊಡಬೇಕಾಗಿರುವುದು ಸಮಾಜದ ಕರ್ತವ್ಯ. ಇದಕ್ಕೆ ವೃದ್ದರ, ಅವರ ಸಂಬಂದಿಕರ, ಸರ್ಕಾರದ ವಿವಿಧ ಅಂಗಗಳ, ಸರ್ಕಾರೇತರ ಸಮಾಜ ಸೇವಾ ಸಂಸ್ಥೆಗಳ,ನಮ್ಮ ನಿಮ್ಮೆಲ್ಲರ ಅವಶ್ಯಕವಾಗಿರುತ್ತದೆ. ಈ ಹಿನ್ನಲೆಯಲ್ಲಿ ಹಿರಿಯ ನಾಗರಿಕರ ರಕ್ಷಣೆಗಾಗಿ ಅಂರಾಷ್ಟ್ರೀಯ ಮಟ್ಟದಲ್ಲಿ 1991 ರಲ್ಲಿ ಪಂಚ ತತ್ವಗಳನ್ನು ಅನುಮೋದಿಸಿದೆ. ಈ ತತ್ವಗಳ ಆಧಾರದ ಮೇಲೆ ಭಾರತ ಸರ್ಕಾರವು ಸಹ ಹಿರಿಯ ನಾಗರಿಕರ ಅನುಕೂಲಕ್ಕಾಗಿ ನಮ್ಮ ದೇಶದ ಸಂವಿಧಾನದ ಕಲಂ 41 ಮತ್ತು 46 ರಲ್ಲಿ ಹಿರಿಯನಾಗರಿಕರ ಹಿತ ರಕ್ಷಣೆ ಸಹ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೊಳ್ಳಿಸಿದೆ.
ಇಂತಹ ಸಂದರ್ಭದಲ್ಲಿ “ ವೃದ್ದಾಶ್ರಮವನ್ನು” 1994 ರಲ್ಲಿ ಶ್ರೀ ಮೈತ್ರಿ ಆಸೋಸಿಯೇಷನ್(ರಿ) ಸಂಸ್ಥೆಯು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅನುದಾನದಡಿಯಲ್ಲಿ ದಾವಣಗೆರೆ ಜಿಲ್ಲೆಯ ದೊಡ್ಡಬಾತಿ ಗ್ರಾಮದ ನಿರ್ಮಲವಾದ ಜಾಗದಲ್ಲಿ ಸಕಲ ಸೌಲಭ್ಯಗಳನ್ನೋಳಗೊಂಡ ಕಟ್ಟಡದಲ್ಲಿ ವೃದ್ದಾಶ್ರಮವನ್ನು ಸ್ಥಾಪಿಸಿ ಈ 27 ವರ್ಷಗಳಲ್ಲಿ ಸುಮಾರು 450 ಜನ ವೃದ್ದರಿಗೆ ಆಶ್ರಯ ನೀಡಿ ಒಂದು ನೆಲೆಯನ್ನು ಕಟ್ಟಿಕೊಟ್ಟಿರುವ ಹೆಮ್ಮೆಯ ಕೇಂದ್ರವಾಗಿರುತ್ತದೆ.
ನಮ್ಮ ಸಂಸ್ಥೆಯು ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಮುಖ್ಯಕಾರಣ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ.ಮೀನಾಕ್ಷಮ್ಮ ಪಾಟೀಲ,ಕಾರ್ಯದರ್ಶಿಗಳಾದ ಡಾ. ಶಂಕರ್ ಪಾಟೀಲ ಬಿ ಜಿ ಅವರ ಪ್ರೊತ್ಸಾಹ ವಾಗಿದೆ. ನಮ್ಮ ಆಶ್ರಮದಲ್ಲಿ ಏನೇ ಚಿಕ್ಕ ಸಮಸ್ಯಯಾದರು ಸಂಸ್ಥೆಯ ಯೋಜನಾ ಅಧಿಕಾರಿಗಳಾದ ವೀರಪ್ಪ ಪಿ ಎಮ್ ಅವರು ತಕ್ಷಣವೆ ಸ್ಪಂಧಿಸುತ್ತಾರೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.ಸಾಮಾಜಿಕ ಮನೋಭಾವನೆಯುಳ್ಳ ನಮ್ಮ ಸಂಸ್ಥೆಯ ಪದಾಧಿಕಾರಿಗಳು ಇನ್ನೂ ಹೆಚ್ಚಿನ ಸೇವೆಯನ್ನು ನೀಡುವಂತೆ ದೇವರು ಶಕ್ತಿ ತುಂಬಲೆಂದು ಶುಭ ಹಾರೈಸುವೆವು.
ಪ್ರವೇಶಕ್ಕೆ ಅರ್ಹತೆ
ಭಾರತೀಯ ಮೂಲದ ಯಾವುದೆ ಹಿರಿಯ ನಾಗರಿಕರಿಗೆ ಪ್ರವೇಶವು ಮುಕ್ತವಾಗಿದೆ ಅವರು ಒಂಟಿತನದಿಂದಾಗಿ ಅಥವಾ ಅವರ/ಅವಳನ್ನು ನೋಡಿಕೊಳ್ಳುವ ಯಾವುದೆ ಕುಟುಂಬ/ ವ್ಯಕ್ತಿಯ ಅನುಪಸ್ಥಿತಿಯಲ್ಲಿ ಅಥವಾ ಅವರ ಜೀವಂತ ಹಕ್ಕನ್ನು ಸಮರ್ಪಕವಾಗಿ ಚಲಾಯಿಸಲು ಸಾಧ್ಯವಾಗದ ವ್ಯಕ್ತಿಗಳು ತಮ್ಮ ಸ್ವಂತ ಮಕ್ಕಳ ರೀತಿಯಿಂದ ನಿರ್ಲಕ್ಷಿಸಲ್ಪಟ್ಟವರು ಅಥವಾ ಕುಟುಂಬ ಹೊಣೆಗಾರಿಕೆಗಳಿಂದ ಮುಕ್ತರಾಗಿರುವರು ಮತ್ತು ತಮ್ಮ ಉಳಿದ ಜೀವನಕ್ಕಾಗಿ ಸಮಾಜಕ್ಕೆ ಸೇವೆ ಸಲ್ಲಿಸಲು ಬಯಸುವವರು.
ಪ್ರವೇಶಕ್ಕೆ ಅನರ್ಹತೆಸಾಂಕ್ರಾಮಿಕ ಅಥವಾ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವ, ಕ್ರಿಮಿನಲ್ ಪ್ರಕರಣಗಳು ಅಥವಾ ಅಪರಾಧಗಳಲ್ಲಿ ಭಾಗಿಯಾಗಿರುವ ಅಥವಾ ಮಧ್ಯಪಾನ /ಡ್ರಗ್ಸ ಔಷಧಗಳು ಇತ್ಯಾದಿಗಳಿಗೆ ವ್ಯಸನಿಯಾಗಿರುವ ಹಿರಿಯ ನಾಗರಿಕರು ಪ್ರವೇಶ ಪಡೆಯಲು ಅನರ್ಹರಾಗಿರುತ್ತಾರೆ.
ವೃದ್ದಾಶ್ರಮ ಸ್ವಯಂ ಸಂಸ್ಥೆಗೆ ಅರ್ಹ ಫಲಾನುಭವಿಗಳು
- ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಮಕ್ಕಳಿಂದ ನಿರ್ಲಕ್ಷಕ್ಕೆ ಒಳಗಾದ ಮಕ್ಕಳಿಲ್ಲದ ಹಿರಿಯ ನಾಗರಿಕರನ್ನು ಪತ್ತೆಮಾಡಿ ದಾಖಲು ಮಾಡಿಕೊಳ್ಳುವುದು
- 60 ವರ್ಷ ವಯೊಮಿತಿ ಮೇಲ್ಪಟ್ಟವರು
- ಗುರುತಿನ ಚೀಟಿ ಹಾಗೂ 4 ಪಾಸ್ಸಪೊರ್ಟ ಭಾವಚಿತ್ರ
- ದಾಖಲೆ ಸಂಧರ್ಭದಲ್ಲಿ ಸಂಬಂದಿಕರಾದಲ್ಲಿ ಅಥವಾ ಪರಿಚಯವಿದ್ದ ವ್ಯಕ್ತಿಯ ಉಪಸ್ಥಿತಿ ಮತ್ತು ಅವರಿಂದ ದೃಡಿಕರಣ ಪತ್ರ
- ಸರ್ಕಾರದ ಹಿರಿಯ ನಾಗರಿಕರ ಕಲ್ಯಾಣ ಕೇಂದ್ರದಿಂದ ಬಂದವರಿಗೆ ಆದೇಶ ಪತ್ರ
- ಸಂಘ ಸಂಸ್ಥೆಗಳಿಂದ ಬಂದರೆ ಆ ಸಂಸ್ಥೆಯ ದೃಡಿಕರಣ ಪತ್ರ
- ಪೋಲಿಸ ಠಾಣೆಯ ದೃಡಿಕರಣ ಪತ್ರ
- ಫಲಾನುಭವಿಯು ದಾಖಲಾಗಲು ಬಯಸುವ ಸ್ವ ಇಚ್ಚೆಯ ಪ್ರಮಾಣಪತ್ರ
- ಫಲಾನುಭವಿಯು ಸಂಬಂದಿಕರು ಇರದೆ ಇದ್ದ ಪಕ್ಷದಲ್ಲಿ ಗ್ರಾಮ ಪಂಚಾಯತ ಅಥವಾ ನಗರ ಸಭೆಯ ಸದಸ್ಯರ ದೃಡಿಕರಣ ಪತ್ರ
- ವಯೋಮಿತಿ ದಾಖಲಾತಿ
APPROACH AND STATERGY
ವೃದ್ರಾಶ್ರಮದ ಪರಿಕಲ್ಪನೆಯು ಇಂದು ಸಾಕಷ್ಟು ಪರಿಚಹಿತವಾಗಿದೆ . ವಯಸ್ಸಾದ ಪೋ಼ಷಕರು ಅನುಭವ ಮತ್ತು ಜ್ಞಾನದ ನಿಧಿ ಮಕ್ಕಳು ಅವರನ್ನು ರಕ್ಷಿಸಬೇಕು ಅವರು ಜೀವನದ ಆಧಾರಸ್ತಂಭ ಹಿರಿಯ ಹಂತ ಹಿರಿಯ ನಾಗರಿಕರಿಗೆ ವೃದ್ರಾಶ್ರಮದಲ್ಲಿ ಪ್ರವೇಶಿಸುವುದು ಮೊದಲ ಆಯ್ಕೆಯಾಗಿರದೆ ಕೊನೆಯ ಆಯ್ಕೆಯಾಗಿರಬೇಕು. ನಮ್ಮ ಅವಿಭಕ್ತ ಕುಟುಂಬಗಳಲ್ಲಿ ಹಿರಿಯರನ್ನು ವಯಸ್ಸಾದ ತಂದೆ ತಾಯಿಯವರನ್ನು ಸಾಕಷ್ಟು ಗೌರವಿಸಲಾಗುತ್ತಿತ್ತು ಮತ್ತು ಅವರು ಸಹ ಗೌರವದಿಂದ ಬದುಕುತ್ತಿದ್ದರು ಅವರ ಕೊನೆಯ ಉಸಿರಾಟದ ತನಕ ಕುಟುಂಬ ಮಕ್ಕಳು ಸಂಬಂದಿಕರು ಮನೆತನ ಘನತೆ ಇವುಗಳನ್ನು ಸಾಂಪ್ರದಾಯಿಕ ಆದರ್ಶ ಪೂರಕವಾಗಿ ಜೀವನ ಸಾಗಿಸುತಿದ್ದರು. ಆದರೆ ಇಂದು ಪರಿಸ್ಥಿತಿಗಳು ಬಹಳಷ್ಟು ಬದಲಾಗಿವೆ ಇಂದಿನ ಯುವ ಪೀಳಿಗೆ ವಯೋವೃದ್ದರನ್ನು ಕಡೆಗಣಿಸಿ ಕುಟುಂಬದಿಂದ ಹಿಂದಕ್ಕೆ ಸರಿಸುತ್ತಿದ್ದಾರೆ ವಯಸ್ಸಾದವರನ್ನು ಕುಟುಂದ ಹೊರೆ ಎಂದು ಭಾವಿಸುತಿದ್ದಾರೆ.
ಜಾಗತೀಕರಣದ ಯುಗದಲ್ಲಿ ವಿಶ್ವವು ಜಾಗತೀಕ ಗುಣಮಟ್ಟದಲ್ಲಿ ಯುವ ಪೀಳಿಗೆಯು ಮುಂದುವರೆದ ಆರ್ಥಿಕತೆ, ಉನ್ನತ ಶಿಕ್ಷಣ, ಉನ್ನತ ವೃತ್ತಿ, ಅಭಿವೃಧ್ದಿ ಹೊಂದುತ್ತಿರುವ ರಾಷ್ಟ್ರಗಳ ಪಾಶ್ಚಿಮಾತ್ಯ ಸಂಸ್ಕ್ರತಿ ಪ್ರಭಾವದಿಂದ ಹಿರಿಯರನ್ನು ಪೊಷಣೆ ಮಾಡಲಾಗದೆ ಭೌತಿಕ ಜೀವನದ ಕಡೆಗೆ ಹೆಚ್ಚು ಒಲವು ಮೂಡುತ್ತಿದೆ. ಇಂತ ಸಂದರ್ಭಗಳಲ್ಲಿ ವೃದ್ದರು ಮಕ್ಕಳ ಪ್ರೀತಿ ಭಾಂದವ್ಯ ಪಡೆದುಕೊಳ್ಳಲಾಗದೆ ಅವರು ಏಕಾಂಗಿತನ ನಿರಾಸೆ ಅಸಂತೋಷದಿಂದ ಭಾವನೆಗಳನ್ನು ಅನಭವಿಸುತ್ತಾರೆ. ವೃದ್ಯಾಪದ ಮನೆಗಳು ಹಿರಿಯ ನಾಗರಿಕರಿಗೆ ಅಗತ್ಯ ಮತ್ತು ವಯಸ್ಸಾದವರನ್ನು ಉತ್ತಮ ಸೌಲಭ್ಯಗಳೊಂದಿಗೆ ಪೋಷಣೆ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ವೃದ್ದಾಶ್ರಮಗಳು ಸಾಮಾಜಿಕ ಸಮೀಕ್ಷೆಗಳಿಂದ ಹಿರಿಯರನ್ನು ನೋಡಿಕೊಳ್ಳುವಲ್ಲಿ ಕರುಣೆ, ಹೊಂದಾಣಿಕೆ, ಪಿತೃವಾತ್ಸಲ್ಯ, ಮಾತೃವಾತ್ಸಲ್ಯ, ಅಂಶಗಳನ್ನು ಮನದಲ್ಲಿಟ್ಟುಕೊಂಡು ಜನಮಾನಸದಲ್ಲಿ ಉಳಿದಿವೆ. ಅವರಿಗೆ ಆಶ್ರಯ ಕಲ್ಪಿಸುವುದರ ಮೂಲಕ ಏಕಾಂಗಿಯಾಗಿ ಅಥವಾ ಕಾಳಜಿ ವಹಿಸಲು ಯಾರೊಬ್ಬರು ಇಲ್ಲದಿರುವಾಗ 60 ವರ್ಷಕ್ಕಿಂತ ಮೇಲ್ಪಟ್ಟ ವೃದ್ದರಿಗೆ ಜಾತಿ ಮತ್ತು ಧರ್ಮವನ್ನು ಲೆಕ್ಕಿಸದೆ ಮಾನವಿಯತೆಯ ಅಂತಕರಣದಿಂದ ಪುಣರ್ ವಸತಿ ಕಲ್ಪಿಸಲಾಗುವುದು.
ವಿಭಕ್ತಕುಟುಂಬಗಳ ಹೆಚ್ಚಳದಿಂದಾಗಿ ವೃದ್ದಾಪ್ಯದ ಮನೆಗಳು ಪ್ರಸ್ತುತ ಸಮಾಜಕ್ಕೆ ಬಹಳ ಮುಖ್ಯ. ವೃದ್ದಾಶ್ರಮಗಳು ಹಿರಿಯ ವಯೊವೃದ್ದರ ಆರೈಕೆ ಕೇಂದ್ರಗಳಾಗಿ, ನಿವೃತ್ತಿನಂತರದ ವಾಸಸ್ಥಾನಗಳಾಗಿ ಬದಲಾಗಿವೆ. ವಯಸ್ಸಾದ ಜನರು ತುಂಬು ಕುಟುಂದಲ್ಲಿ ಗೌರವ್ವಾನಿತ ಸ್ಥಾನವನ್ನು ಹೊಂದಿದ್ದರು ಮತ್ತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ವಯಸ್ಸಾದವರ ಕೈಯಲ್ಲಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ವಿಭಕ್ತ ಕುಟುಂಬಗಳ ಪ್ರಭಾವದಿಂದ ವಯಸ್ಸಾದ ಹೆತ್ತವರನ್ನು ಹೊರೆಯಾಗಿ ದೈಹಿಕವಾಗಿ ಮಾನಸಿಕವಾಗಿ ಆರ್ಥಿಕವಾಗಿ ಅಮಾನವೀಯ ವರ್ತನೆಗಳಿಂದ ನಿಂದನೆಗಳ ಮೂಲಕ ತಮ್ಮ ಹೆತ್ತವರನ್ನು ದೂರಮಾಡುವ ಮೂಲಕ ಅವರಿಗೆ ಕುಟುಂಬದಿಂದ ಕಡೆಗಣಿಸುವ ಮನೋಭಾವನೆ ಬೆಳೆದು ಬಂದಿದೆ ಇದು ಒಂದು ವೃದ್ದಾಶ್ರಮಗಳ ಹೆಚ್ಚಳಕ್ಕೆ ಕಾರಣವಾಗಿದೆ.ದಿನದಿಂದ ದಿನಕ್ಕೆ ವಯಸ್ಸಾದವರು ಹೆಚ್ಚು ಪ್ರತ್ಯೇಕವಾಗುತ್ತಿದ್ದಾರೆ ಯುವ ಪೀಳಿಗೆ ತಂದೆ ತಾಯಿಯವರನ್ನ ಕಾಳಜಿ ಹೊಂದಾಣಿಕೆ ಮಾಡದೆ ಕಡಿಮೆ ತಾಳ್ಮೆ ಮತ್ತು ಸಮಯದಿಂದ ಮಕ್ಕಳು ಸ್ವತ ವೃದ್ದಾಶ್ರಮಕ್ಕೆ ಸೇರಲು ಒತ್ತಾಯಿಸುತಿದ್ದಾರೆ ಇದು ಒಂದು ಆಯ್ಕೆಯಾಗಿರುತ್ತದೆ.
ವೃದ್ದರನ್ನು ಹಿರಿಯ ನಾಗರಿಕರನ್ನು ಗೌರವದಿಂದ ಪ್ರೀತಿಯಿಂದ ಕಂಡು ಆರೈಕೆ ಮಾಡುವ ಅವಶ್ಯಕತೆ ಇರುತ್ತದೆ ಆ ನಿಟ್ಟಿನಲ್ಲಿ ಸುರಭಿ ವೃದ್ದಾಶ್ರಮವು ಕಾಯ,ವಾಚ,ಮನಸಾ,ಉದ್ದೇಶಗಳಿಂದ ಮುನ್ನೆಡೆಯುತ್ತಾ ಸಾಗುತ್ತಿದೆ.ವಯಸ್ಸಾದ ವೃದ್ದರು ಒಟ್ಟಿಗೆ ವಾಸಿಸಲು ಸಮುದಾಯದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸುರಭಿ ವೃದ್ದಾಶ್ರಮದಲ್ಲಿ ಆರೈಕೆ ಮತ್ತು ಸೇವೆಗಳನ್ನು ಈ ಕೆಳಗಿನಂತೆ ಕಲ್ಪಿಸಲಾಗುವುದು.
- ಹಿರಿಯ ನಾಗರಿಕರಿಗಾಗಿ ನಾವು 27 ವರ್ಷಗಳಿಂದ ವೃದ್ದಾಶ್ರಮದ ಸೇವೆಯಲ್ಲಿ ನಿರತರಾಗಿದ್ದೆವೆ ಇಲ್ಲಿ ಉಳಿದುಕೊಂಡಿರುವ ಎಲ್ಲಾ ಹಿರಿಯ ಜನರು ಅವರಿಗೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಯಾವಾಗಲು ನಮ್ಮನ್ನು ಆಶೀರ್ವದಿಸುತ್ತಾರೆ. ನಮ್ಮ ಸೇವೆಗಳಿಗೆ ಸಂಬಂದಿಸಿದಂತೆ ಅವರಿಂದ ಯಾವುದೆ ಕೆಟ್ಟ ಪ್ರತಿಕ್ರಿಯೇ ಮತ್ತು ದೂರುಗಳನ್ನು ನಾವು ಎಂದಿಗೂ ಕೇಳುವುದಿಲ್ಲಾ
- ಮನೆಯಲ್ಲಿ ಸರಳವಾಗಿ ವಾಸಿಸುವುದರಿಂದ ಪ್ರತಿಯೊಬ್ಬರಿಗೂ ಬೇಸರ ಮತ್ತು ಆತಂಕ ಉಂಟಾಗುತ್ತದೆ. ಹಿರಿಯ ನಾಗರಿಕರಿಗಾಗಿ ನಮ್ಮ ವೃದ್ದಾಶ್ರಮದಲ್ಲಿ ನಿವಾಸಿಗಳು ಜೀವನವು ನೀರಸವೆಂದು ನಾವುಎಂದಿಗೂ ಬಿಡುವುದಿಲ್ಲ. ಅವರ ಆಸಕ್ತಿಯ ಪ್ರಕಾರ ಎಲ್ಲಾ ಜನರ ವಿನೋದ ಮತ್ತು ಮನರಂಜನೆಗಾಗಿ ನಿಯಮಿತ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ.
- ಬೆಳಗಿನ ಉಪಹಾರ, ಮಧ್ಯಾನ್ಹದ ಭೋಜನವಾಗಲಿ, ಹಿರಿಯ ನಾಗರಿಕರಿಗೆ ಸಂಪೂರ್ಣವಾಗಿ ಶುದ್ದ ಮತ್ತು ಆರೋಗ್ಯಕರವಾದ ಅತ್ಯುತ್ತಮ ಊಟವನ್ನು ನೀಡಲಾಗುತ್ತಿದೆ. ವಯಾಸ್ಸಾದ ಜನರ ರುಚಿಯನ್ನು ಅರ್ಥಮಾಡಿಕೊಂಡು ಸಮತೋಲನ ಆಹಾರವನ್ನು ಪೂರೈಸುತ್ತೇವೆ.
- ನಮ್ಮ ವೃದ್ದಾಶ್ರಮಗಳಲ್ಲಿ ನಿಯಮೀತವಾಗಿ ವೈದ್ಯರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ವೃದ್ದರ ಯಾವುದೆ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಕಾಳಜಿ ವಹಿಸಲು ಯಾವಾಗಲು ಇರುತ್ತಾರೆ ಈ ವಯಸ್ಸಿನಲ್ಲಿ ದೇಹವು ರೋಗಗಳಿಗೆ ಹೆಚ್ಚು ಒಳಗಾಗುವುದರಿಂದ ಹೆಚ್ಚಿನ ಕಾಳಜಿ ಮತ್ತು ಗಮನ ಅಗತ್ಯವಿರುವುದರಿಂದ ಆರೋಗ್ಯ ತಪಾಸನೆ ಮಾಡಲಾಗುತ್ತದೆ.
- ಹಿರಿಯ ನಾಗರಿಕರಿಗಾಗಿ ನಮ್ಮ ವೃದ್ದಾಶ್ರಮದಲ್ಲಿ ಎಲ್ಲ ಜನರಿಗೆ ಅವರ ಆರೋಗ್ಯ ಮತ್ತು ದೇಹದ ಅವಶ್ಯಕತೆಗಳನ್ನು ಆದರಿಸಿ ಸರಿಯಾದ ಆಹಾರ ಮೆನು ಅನ್ನು ನಾವು ಸಿದ್ದಪಡಿಸಿದ್ದೇವೆ
- ನಮ್ಮ ವೃದ್ದಾಶ್ರಮದಲ್ಲಿ ಸೇವೆಗಳನ್ನು ಪ್ರೀತಿಯಿಂದ ನಾವು ಎಷ್ಟು ನೀಡುತ್ತೇವೆ ಎಂದು ನಾವು ಗಮನ ಹರಿಸುವುದಿಲ್ಲ ಅವರ ಲವಲವಿಕೆಯ ಮತ್ತು ಸಂತೋಷದಾಯಕ ವಾತಾವರಣದೊಂದಿಗೆ ಸಂಪೂರ್ಣ ಸ್ವಾತಂತ್ರ್ಯ ಮತ್ತು ಸುರಕ್ಷತೆಯೊಂದಿಗೆ ಅವರ ಜೀವನವನ್ನು ಕಾಪಾಡುತ್ತೇವೆ.
- ಎಲ್ಲ ಜನರೊಂದಿಗೆ ಮೃದುವಾಗಿ ಮತ್ತು ಚೆನ್ನಾಗಿ ವಯಸ್ಸಾದವರೊಂದಿಗೆ ವ್ಯವಹರಿಸಲು ನಮ್ಮ ಸಿಬ್ಬಂದಿಗೆ ಪರಿಪೂರ್ಣ ತರಬೇತಿ ನೀಡಲಾಗಿರುತ್ತದೆ. ಪರಿಸ್ಥಿತಿ ಸನ್ನಿವೇಶ ಯಾವುದೆ ಇರಲಿ ಅವರ ಆರೈಕೆ ಮಾಡಲು ನಾವು ಯಾವಾಗಲು ಸಿದ್ದರಾಗಿರುತ್ತೇವೆ.
- ಪ್ರತಿ ಫಲಾನುಭವಿಯ ಆಪ್ತಸಮಾಲೋಚನೆಯನ್ನು ಮಾಡಿ ಅವರಲ್ಲಿ ಮನೋಚೈತನ್ಯ, ಆತ್ಮಗೌರವ ಎಲ್ಲವನ್ನು ಮರೆತು ನೆಮ್ಮದಿಯಿಂದ ನಗುತಾಯಿರುವಂತೆ ಮಾಡುವುದು.
